alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದ ಪಾರ್ಟಿ ಕೊಟ್ಟು ಆಸ್ಪತ್ರೆ ಸೇರಿದ ನಟಿ

ಹಿಂದಿ ಸೀರಿಯಲ್ ನಟಿ ಸರಾ ಖಾನ್ ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮವನ್ನು ಇತ್ತೀಚೆಗಷ್ಟೆ ದೂರದ ದುಬೈನಲ್ಲಿ ಸ್ನೇಹಿತರೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ಆದ್ರೆ ವಿಚಿತ್ರ ನೋಡಿ. ಬರ್ತಡೇ ಪಾರ್ಟಿಯ ಅಂತ್ಯದಲ್ಲಿ ಸರಾಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿ ತಿಂದಂತಾ ಊಟವೇ ವಿಷವಾದ ಪರಿಣಾಮ ಸರಾಖಾನ್ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಅಪಾಯದಿಂದ ಪಾರಾಗಿದ್ದಾರೆ.

ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸರಾಖಾನ್, ಬರ್ತಡೇ ಪಾರ್ಟಿಯಲ್ಲಿ ಸೇವಿಸಿದ ಆಹಾರವೇ ಫುಡ್ ಪಾಯ್ಸನ್ ಆಗಿ ಪರಿವರ್ತನೆಯಾಗಿದೆ, ಹುಟ್ಟುಹಬ್ಬದ ದಿನ ಹೀಗೆ ಎಂಡ್ ಆಗುತ್ತೆ ಅಂತ ನಾನು ಭಾವಿಸಿರಲಿಲ್ಲ. ಈ ಹುಟ್ಟುಹಬ್ಬದ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇಂತಾ ಅನುಭವದ ಜೀವನದಲ್ಲಾಗ್ತಿರೋದು ಇದೇ ಮೊದಲು . ಸದ್ಯ ನಾನು ಆರೋಗ್ಯದಿಂದಿದ್ದೇನೆ ಅಂತ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿದ್ದಾರೆ.

ಸರಾಖಾನ್ ಪೋಸ್ಟ್ ನೋಡಿದ ಅಭಿಮಾನಿಗಳು ಆಕೆಗೆ ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಬೇಗನೆ ಗುಣಮುಖರಾಗಿ ಅಂತ ಹಾರೈಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮ ಆಸ್ಪತ್ರೆ ಸೇರೋದ್ರೊಂದಿಗೆ ಎಂಡ್ ಆಗಿರೋದು ಮಾತ್ರ ಸರಾಗೆ ನಿರಾಸೆಯನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...