alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಲಮಗಳೊಂದಿಗಿರುವ ಕರೀನಾ ಫೋಟೋ

ಸೈಫ್ ಅಲಿಖಾನ್ ರ ಮೊದಲ ಪತ್ನಿಯ ಪುತ್ರಿ ಸಾರಾ ಅಲಿಖಾನ್ ಮತ್ತು ಕರೀನಾ ನಡುವೆ ದಿನೇ ದಿನೇ ಬಾಂಧವ್ಯ ವೃದ್ಧಿಯಾಗ್ತಿದೆ. ಶನಿವಾರ ರಾತ್ರಿ ನಟಿ ಸೋಹಾ ಅಲಿಖಾನ್ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಸೈಫ್ ಮತ್ತು ಕರೀನಾ ದಂಪತಿ ಪಾಲ್ಗೊಂಡಿದ್ದರು. ಈ ಪಾರ್ಟಿಗೆ ಸೈಫ್ ಅಲಿಖಾನ್ ಮೊದಲ ಪತ್ನಿಯ ಪುತ್ರಿ ಸಾರಾ ಕೂಡ ಆಗಮಿಸಿದ್ದರು.

ಪಾರ್ಟಿ ಮುಗಿದ ನಂತರ ಸೈಫ್ ಅಲಿಖಾನ್ ಮತ್ತು ಕರೀನಾ ದಂಪತಿ ಕಾರ್ ವರೆಗೂ ಬಂದು ಸಾರಾಳನ್ನ ಬೀಳ್ಕೊಟ್ಟರು. ಸಾರಾ ಕಾರು ಹತ್ತುವ ಸಮಯದಲ್ಲಿ ಕರೀನಾ ಆಕೆಯನ್ನ ಬಿಗಿದಪ್ಪಿಕೊಂಡು ಸುರಕ್ಷಿತವಾಗಿ ಮನೆ ತಲುಪುವಂತೆ ಹೇಳಿದರು. ಸಾರಾ ಮತ್ತು ಕರೀನಾ ಬಾಂಧವ್ಯವನ್ನು ಸೂಚಿಸುವ ಈ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾರಾ ಅಲಿಖಾನ್ ನಾಯಕಿಯಾಗಿ ಬಾಲಿವುಡ್ ಪ್ರವೇಶಿಸೋದ್ರ ಬಗ್ಗೆಯೂ ಕರೀನಾ ಹೆಚ್ಚು ಕಾಳಜಿ ವಹಿಸ್ತಿದ್ದಾರೆ. ಅತಿ ಶೀಘ್ರದಲ್ಲೇ ಸಾರಾ ಅಲಿಖಾನ್ ಅಭಿನಯದ ಚಿತ್ರ ಸೆಟ್ಟೇರಲಿದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...