alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ಬಿಡುಗಡೆಗೂ ಮುನ್ನವೇ ಅಭಿಮಾನಿಗಳ ಮನ ಗೆದ್ದ ಬೆಡಗಿ

ಸಾರಾ ಅಲಿ ಖಾನ್ ಅಭಿಮಾನಿಗಳ ಒತ್ತಾಯದ ಮೇರೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಗೆ ಪಾದಾರ್ಪಣೆಯನ್ನು ಮಾಡಿದ್ರು. ಆಗಿನಿಂದಲೂ ಅಭಿಮಾನಿಗಳು ಸಾರಾರನ್ನು ಫಾಲೋ ಮಾಡ್ತಾ ಇದ್ದಾರೆ. ಅಲ್ಲದೆ ಬೆಳ್ಳಿ ತೆರೆಯ ಮೇಲೆ ಮಿಂಚದೆ, ಅಪಾರ ಅಭಿಮಾನಿಗಳನ್ನು ಹೊಂದಿದ ನಟಿಯರ ಪಟ್ಟಿಯಲ್ಲಿ ಸಾರಾಗೂ ಸ್ಥಾನ ಸಿಕ್ಕಿದೆ.

ಇತ್ತೀಚೆಗೆ ಸಾರಾ ತನ್ನ ಎರಡನೇ ಪೋಸ್ಟ್ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, ಸದ್ಯ ಭಾರೀ ಸದ್ದು ಮಾಡ್ತಾ ಇದೆ. ಫೋಟೋ ಕೆಳಗೆ ಬರೆದ ಕ್ಯಾಪ್ಶನ್ ಅಭಿಮಾನಿಗಳನ್ನು ಆಕರ್ಷಿಸಿದೆ. ಸೂರ್ಯನಷ್ಟೇ ‘ನೀವು ಪ್ರಕಾಶಮಾನರಾಗಲು ಬಯಸಿದ್ದರೆ, ಸೂರ್ಯನಂತೆ ಪ್ರಕಾಶಿಸುವುದು ಅವಶ್ಯಕ’ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಸಾರಾ ಹಾಕಿರುವ ಫೋಟೋ ಎಲ್ಲರ ಮನ ಗೆದ್ದಿದೆ.

ಇನ್ಸ್ಟಾಗ್ರಾಮ್ ನಲ್ಲಿ ಸ್ವಾತಂತ್ರ್ಯ ದಿನಾಚಾರಣೆಯ ಶುಭ ಕೋರಿದ್ದ ಸಾರಾ ಸಂದೇಶಕ್ಕೆ ಸುಮಾರು 30 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದ್ದವು. ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ರ ಪುತ್ರಿ ಸಾರಾ, ಅಭಿಷೇಕ್ ಕಪೂರ್ ರ ‘ಕೇದಾರನಾಥ್’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಡಲಿದ್ದಾರೆ. ಚಿತ್ರ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ 24ನೇ ವಸಂತಕ್ಕೆ ಕಾಲಿಟ್ಟಿರುವ ಸಾರಾ, ಬೆಳ್ಳಿ ತೆರೆಗೆ ಕಾಲಿಡುವ ಮುನ್ನವೇ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...