alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಂ, ದಿಶಾ ಇದ್ರೂ ಎಲ್ಲರ ಕಣ್ಣು ಸಾರಾ ಮೇಲಿತ್ತು….

sara

ಬಾಲಿವುಡ್ ಎಂಟ್ರಿಗೆ ಸಜ್ಜಾಗಿರುವ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಳ ಬ್ಯೂಟಿಗೆ ಫ್ಯಾಷನ್ ಲೋಕ ಕ್ಲೀನ್ ಬೋಲ್ಡ್ ಆಗಿದೆ. ದೆಹಲಿಯಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಪಿಂಕ್ ಲೆಹಂಗಾ ಹಾಗೂ ಸಿಲ್ವರ್ ಕಲರ್ ಬ್ಲೌಸ್ ತೊಟ್ಟಿದ್ದ ಸಾರಾ, ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ಲು.

sara-1

ತಾಯಿ ಅಮೃತಾ ಸಿಂಗ್ ಜೊತೆಗೆ ಆಗಮಿಸಿದ್ದ ಸಾರಾ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಇನ್ನೊಂದು ವಿಶೇಷ ಅಂದ್ರೆ ಸೋನಂ ಕಪೂರ್ ಹಾಗೂ ದಿಶಾ ಪಟಾನಿ ಕೂಡ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ್ದಾರೆ. ಸೋನಂ ಕಪೂರ್ ಶೋ ಸ್ಟಾಪರ್ ಆಗಿದ್ಲು.

sonam

ಆದ್ರೆ ಫ್ಯಾಷನ್ ಪ್ರಿಯರನ್ನು ಸೆಳೆದವರು ಸಾರಾ ಅಲಿ ಖಾನ್. ಬ್ಯೂಟಿಯಲ್ಲಿ ಸೋನಂ ಹಾಗೂ ದಿಶಾ ಇಬ್ಬರನ್ನೂ ಸಾರಾ ಮೀರಿಸಿದ್ಲು. ಅತಿಯಾದ ಮೇಕಪ್ ಇಲ್ಲದೆ ಸಿಂಪಲ್ ಆಗಿಯೇ ಸ್ಪೆಷಲ್ ಲುಕ್ ನಲ್ಲಿ ಕಂಗೊಳಿಸಿದ್ದಾಳೆ.

sara-2

ಬಾಲಿವುಡ್ ನಟಿಯರ ರೇಸ್ ನಲ್ಲಿ ಈಗ ಸಾರಾ ಕೂಡ ಹಾಜರಾಗಿದ್ದಾಳೆ. ಸದ್ಯದಲ್ಲೇ ಚೊಚ್ಚಲ ಚಿತ್ರ ‘ಕೇದಾರನಾಥ’ ಶೂಟಿಂಗ್ ನಲ್ಲೂ ಪಾಲ್ಗೊಳ್ಳಲಿದ್ದಾಳೆ. ಕೇದಾರನಾಥ ಚಿತ್ರ ಮುಂದಿನ ವರ್ಷ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್, ಸಾರಾಗೆ ಜೋಡಿಯಾಗ್ತಿದ್ದಾರೆ.

sara-3

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...