alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ನಲ್ಲಿ ಬೆವರಿಳಿಸ್ತಿದ್ದಾಳೆ ಸೈಫ್ ಮಗಳು

ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮೊದಲೇ ಸೆಲೆಬ್ರಿಟಿ ಪಟ್ಟಿ ಸೇರಿದವರಲ್ಲಿ ಸಾರಾ ಅಲಿ ಖಾನ್ ಕೂಡ ಒಬ್ಬಳು. ಸಾರಾ ಆಗಾಗ ಮಾಧ್ಯಮದಲ್ಲಿ ಸುದ್ದಿಗೆ ಬರ್ತಿರುತ್ತಾಳೆ. ಸಾರಾ ಅಲಿ ಖಾನ್, ಸೈಫ್ ಅಲಿ ಖಾನ್ ಹಾಗೂ ಮೊದಲ ಪತ್ನಿ ಅಮೃತಾ ಸಿಂಗ್ ಮಗಳು. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುವ ಸಾರಾ ಜಿಮ್ ನಲ್ಲಿ ಕಸರತ್ತು ಮಾಡ್ತಿದ್ದಾಳೆ.

ಸಾರಾ ಜಿಮ್ ನಿಂದ ಹೊರಗೆ ಬರುತ್ತಿರುವ ಫೋಟೋ ವೈರಲ್ ಆಗಿದೆ. ಸಾರಾ ಕಡಿಮೆ ಮೇಕಪ್ ಮಾಡಿದ್ರೂ ಸುಂದರವಾಗಿ ಕಾಣ್ತಿದ್ದಾಳೆ, ಜೊತೆಗೆ ಕೈನಲ್ಲೊಂದು ಪುಸ್ತಕ ಹಿಡಿದಿದ್ದಾಳೆ. ಸಾರಾ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ತನ್ನ ವೃತ್ತಿ ಶುರುಮಾಡಲಿದ್ದಾಳೆ. ಇದಕ್ಕಾಗಿಯೇ ಸಿದ್ಧವಾಗ್ತಿರುವ ಸಾರಾ ಜಿಮ್ ನಲ್ಲಿ ಬೆವರಿಳಿಸ್ತಿದ್ದಾಳೆ.

ಸಾರಾ ಯಾವ ಚಿತ್ರದ ಮೂಲಕ ತನ್ನ ವೃತ್ತಿ ಶುರುಮಾಡ್ತಾಳೆನ್ನುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಈ ಬಗ್ಗೆ ತಂದೆ ಸೈಫ್ ಅಲಿ ಖಾನ್ ಹಾಗೂ ಮಲತಾಯಿ ಕರೀನಾ ಮಧ್ಯೆ ಸಣ್ಣಪುಟ್ಟ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ. ಕೊನೆಯಲ್ಲಿ ಕೇದಾರನಾಥ ಫೈನಲ್ ಆಗಿದೆ. ಸುಶಾಂತ್ ಸಿಂಗ್ ಜೊತೆ ಸಾರಾ ರೋಮ್ಯಾನ್ಸ್ ಮಾಡಲಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...