alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷದಿಂದ ಫೋಟೋ ಶೂಟ್ ಗಾಗಿ ಕಾಯುತ್ತಿದ್ದಾರಂತೆ ಈ ನಟಿ

ಈಗಂತೂ ಸಾಮಾಜಿಕ ಜಾಲತಾಣ ಎಂದರೆ ಅಲ್ಲಿ ನಟ- ನಟಿಯರದ್ದೆ ಕಾರುಬಾರು. ಅವರ ಪ್ರತಿ ಪೋಸ್ಟ್ ಸಹ ಸುದ್ದಿಯಾಗುತ್ತದೆ. ಈಗ ನಟಿ ಸಾರಾ ಅಲಿಖಾನ್ ಸುದ್ದಿಯಲ್ಲಿದ್ದಾರೆ.

24ರ ಹರೆಯದ ಸಾರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಐದು ವರ್ಷ ವಯಸ್ಸಿನಲ್ಲಿದ್ದಾಗ ತೆಗೆಸಿಕೊಂಡಿದ್ದ ಮೂರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿವೆ.

ಈ ಫೋಟೋವನ್ನು ಇನ್ಸ್ಟಾ ದಲ್ಲಿ ಶೇರ್ ಮಾಡಿದ ಸಾರಾ ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ……2000 ನೇ ಇಸ್ವಿಯಿಂದ ಇಲ್ಲಿಯವರೆಗೆ ನನ್ನ ಚಿತ್ರೀಕರಣಕ್ಕೆ ಕಾಯುತ್ತಿರುವೆ ಎಂದು ಹೇಳಿಕೊಂಡಿದ್ದಾರೆ.

ಇದರಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಸಾರಾ, ಲೆಹೆಂಗಾ – ಚೋಲಿ, ದುಪ್ಪಟ್ಟ ಹಾಗೂ ಇದೇ ಮಾದರಿಯ ಇನ್ನೊಂದು ಫೋಟೊದಲ್ಲಿ ದುಪ್ಪಟ್ಟವನ್ನು ತಲೆ ಮೇಲೆ ಇಟ್ಟುಕೊಂಡು ಭರತನಾಟ್ಯದ ಭಂಗಿಯಲ್ಲಿ ಕೈಯನ್ನು ತೋರಿಸಿದ್ದಾರೆ. ತಾವು ಐದು ವರ್ಷದವಳಾಗಿದ್ದಾಗ ತೆಗೆಸಿಕೊಂಡ ಫೋಟೊ ಇದಾಗಿದೆ ಎಂದು ಅವರು ಅದರಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ನನ್ನ ಸಮಯ ಬಂದಿದೆ ಮತ್ತು ಸಾರಾ ಡ್ರಾಮಾ ಶುರುವಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...