alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಸ್ಟಾರ್ ನಟನ ಪುತ್ರಿ

ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಸುಶಾಂತ್ ಸಿಂಗ್ ರಜ್ಪೂತ್ ಕಾಂಬಿನೇಷನ್ನಲ್ಲಿ ಬರುತ್ತಿರೋ ಕೇದಾರ್ ನಾಥ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ. ಸಿನಿಮಾ ಬಿಡುಗಡೆಗೆ ಮೊದಲೇ ಸಾರಾ ಅಲಿಖಾನ್ ಸಾಮಾಜಿಕ ಜಾಲತಾಣವನ್ನ ಪ್ರವೇಶಿಸಿದ್ದಾರೆ. ಹೌದು….ಸೋಷಿಯಲ್ ಮೀಡಿಯಾದಲ್ಲಿ ಇನ್ಸ್ಟಾ ಗ್ರಾಮ್ ಖಾತೆಯನ್ನು ತೆರೆಯುವ ಮೂಲಕ ಸಿನಿ ಜಗತ್ತಿನ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಈ ಹಿಂದಿನಿಂದಲೂ ಸಾರಾ ಅಲಿ ಖಾನ್ ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವಂತೆ ಮನವಿಗಳಿದ್ವು. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್ ಟ್ಯಾಗ್ ಚಳವಳಿಯನ್ನೇ ಶುರುಮಾಡಿಬಿಟ್ಟಿದ್ದರು. ಹಾಗಾಗಿ ಸಾರಾ ಅಲಿಖಾನ್ ಸೋಷಿಯಲ್ ಮೀಡಿಯಾದ ಖಾತೆ ತೆರೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಕೌಂಟ್ ಗೆ ಬರುತ್ತಿರುವ ಸಂದೇಶ ಮತ್ತು ಫಾಲೋವರ್ಸ್ ಗಳ ಸ್ಕ್ರೀನ್ ಶಾಟ್ ನ್ನ ತಮ್ಮ ಮೊದಲ ಪೋಸ್ಟ್ ಆಗಿ ಸಾರಾ ಅಲಿ ಖಾನ್ ಹಾಕಿದ್ದಾರೆ. ಬಾಲಿವುಡ್ ನ ಇತರೆ ಕಲಾವಿದರಾದ ಜಾಹ್ನವಿ ಕಪೂರ್, ಅಲಿಯಾ ಭಟ್, ಹರ್ಷವರ್ಧನ್ ಕಪೂರ್ ಸೇರಿದಂತೆ ಅನೇಕರು ಸಾರಾ ಖಾನ್ ಫಾಲೋ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...