alex Certify
ಕನ್ನಡ ದುನಿಯಾ       Mobile App
       

Kannada Duniya

ಸಪ್ನಾ ಚೌಧರಿ ಶೋನಲ್ಲಿ ಅಭಿಮಾನಿಗಳ ದಾಂಧಲೆ

ಬಿಗ್ ಬಾಸ್ ಖ್ಯಾತಿಯ ಸಪ್ನಾ ಚೌಧರಿ ಶೋನಲ್ಲಿ ಜನರು ದಾಂಧಲೆ ಎಬ್ಬಿಸಿದ್ದಾರೆ. ತಮಗೆ ಸಪ್ನಾಳ ಡಾನ್ಸ್ ವೀಕ್ಷಣೆಗೆ ಅವಕಾಶ ನೀಡಿಲ್ಲ ಅನ್ನೋ ಕೋಪಕ್ಕೆ ಭದ್ರತಾ ಸಿಬ್ಬಂದಿಗೆ ಥಳಿಸಿದ್ದಾರೆ. ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.

ಕಾನ್ಪುರದ ಬ್ರಿಜೇಂದ್ರ ಸ್ವರೂಪ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ನುಗ್ಗಲು ಪ್ರಯತ್ನಿಸಿ ಹಲವರು ಗಾಯಗೊಂಡಿದ್ದಾರೆ. ಈ ಗದ್ದಲ ಗಲಾಟೆಯಿಂದಾಗಿ ಕಾರ್ಯಕ್ರಮವನ್ನು ಅರ್ಧಕ್ಕೇ ಸ್ಥಗಿತಗೊಳಿಸಬೇಕಾಯ್ತು.

ಆಯೋಜಕರು ಸಪ್ನಾ ಚೌಧರಿಯನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದರು. ಸಪ್ನಾ, ಪ್ರಸಿದ್ಧ ಹಾಡಿಗೆ ನರ್ತಿಸಲು ಶುರು ಮಾಡ್ತಿದ್ದಂತೆ ಜನರು ಬೊಬ್ಬೆ ಹೊಡೆಯಲು ಶುರು ಮಾಡಿದ್ರು. ಶಾಂತಿ ಕಾಪಾಡುವಂತೆ ಮನವಿ ಮಾಡಿದ್ರೂ ಪ್ರಯೋಜನವಾಗಲಿಲ್ಲ.

ಪಾಸ್ ಅಥವಾ ಟಿಕೆಟ್ ಇಲ್ಲದೆಯೇ ಒಳನುಗ್ಗಲು ಪ್ರಯತ್ನಿಸಿದ್ರು. ಅವರನ್ನು ತಡೆದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ರು. ಪೊಲೀಸರ ಬ್ಯಾರಿಕೇಡ್ ಮುರಿದು ದಾಂಧಲೆ ಎಬ್ಬಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...