alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟಾರ್ ಡೈರೆಕ್ಟರ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಪವರ್ ಸ್ಟಾರ್

‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಇಂದು ಸುರಭಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಕಳೆದ ವರ್ಷ ನವೆಂಬರ್ ನಲ್ಲಿ ಬಳ್ಳಾರಿಯಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಇಂದು ಮದುವೆ ನಡೆಯಲಿದೆ. ನಿನ್ನೆ ರಾತ್ರಿ ನಡೆದ ಆರತಕ್ಷತೆಯಲ್ಲಿ ಸಿನಿ ಗಣ್ಯರು ಸಾಕ್ಷಿಯಾಗಿದ್ದಾರೆ.

ಜೆ.ಪಿ. ನಗರದ ಸಿಂಧೂರಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಸಂತೋಷ್ ಆನಂದರಾಮ್ –ಸುರಭಿ ಜೋಡಿಗೆ ಸಿನಿತಾರೆಯರು ಶುಭ ಹಾರೈಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದು, ನನಗೆ ಒಳ್ಳೆಯ ಚಿತ್ರ ಕೊಟ್ಟ ನಿರ್ದೇಶಕ. ಅವರಿಗೆ ಒಳ್ಳೆಯದಾಗಲಿ ಎಂದು ಅಪ್ಪು ಶುಭ ಹಾರೈಸಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್, ಜಗ್ಗೇಶ್, ಅನಂತನಾಗ್, ‘ದುನಿಯಾ’ ವಿಜಯ್, ರಾಘವೇಂದ್ರ ರಾಜಕುಮಾರ್, ಶರತ್ ಕುಮಾರ್, ಶರಣ್, ಸಾ.ರಾ. ಗೋವಿಂದು, ಅಮೂಲ್ಯ, ಪ್ರೇಮ್ ಸೇರಿದಂತೆ ಹಲವಾರು ತಾರೆಯರು ಶುಭ ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...