alex Certify
ಕನ್ನಡ ದುನಿಯಾ       Mobile App
       

Kannada Duniya

”ನಾನು ಕೆಟ್ಟ ವ್ಯಕ್ತಿ, ಆದ್ರೆ ಭಯೋತ್ಪಾದಕನಲ್ಲ”

ಸಂಜಯ್ ದತ್ ಜೀನವಚರಿತ್ರೆ ಸಂಜು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೂರು ನಿಮಿಷದ ಟ್ರೈಲರ್ ನಲ್ಲಿ ಸಂಜಯ್ ಜೀವನದ ಏಳು-ಬೀಳುಗಳನ್ನು ತೋರಿಸಲಾಗಿದೆ. ಟ್ರೈಲರ್ ನಲ್ಲಿ ಸಂಜಯ್ ದತ್ ಒಂದು ಡೈಲಾಗ್ ಪದೇ ಪದೇ ಹೇಳಿದ್ದಾರೆ. ನಾನು ಕೆಟ್ಟ ವ್ಯಕ್ತಿ. ಆದ್ರೆ ಭಯೋತ್ಪಾದಕನಲ್ಲ ಎಂಬ ಡೈಲಾಗ್ ಆಗಾಗ ಕೇಳಿ ಬಂದಿದೆ.

ಸಂಜಯ್ ದತ್ ಪಾತ್ರಕ್ಕೆ ರಣಬೀರ್ ಕಪೂರ್ ಜೀವ ತುಂಬಿದ್ದಾರೆ. ರಣಬೀರ್ ನಡೆ, ನುಡಿ ಸಂಜಯ್ ದತ್ ರನ್ನೇ ಹೋಲುತ್ತದೆ. ಟ್ರೈಲರ್ ಆರಂಭದಲ್ಲಿ ಸಂಜಯ್ ಧ್ವನಿ ಕೇಳಿ ಬಂದಿದೆ. ನನಗೆ ಇಂದು ಬಹಳ ಖುಷಿಯಾಗಿದೆ. ನನ್ನ ಜೀವನಕಥೆ ನಿಮ್ಮ ಮುಂದಿದೆ. ಇಂಥ ವೈವಿದ್ಯಮಯ ಜೀವನ ನಿಮಗೆ ಎಲ್ಲಿ ಸಿಗಲು ಸಾಧ್ಯ ಎಂದು ಸಂಜಯ್ ಕೇಳ್ತಾರೆ.

ಟ್ರೈಲರ್ ನಲ್ಲಿ ಕಾಲೇಜು, ಸಿನಿಮಾ, ಜೈಲಿನಲ್ಲಿ ಕಳೆದ ಎಲ್ಲ ಕ್ಷಣಗಳನ್ನು ಭಾವನಾತ್ಮಕ ಶೈಲಿಯಲ್ಲಿ ತೋರಿಸಲಾಗಿದೆ. ರಾಜ್ಕುಮಾರ್ ಹಿರಾನಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಜೂನ್ 29ರಂದು ಚಿತ್ರ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...