alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ಯನ್ನು ಹಿಂದಿಕ್ಕಿದ್ದಾನೆ ಸಂಜು…!ಎಲ್ಲಿ ಗೊತ್ತಾ?

ಈವರೆಗೆ ಆಸ್ಟ್ರೇಲಿಯಾದಲ್ಲಿ ಬಾಹುಬಲಿ-2 ಮಾಡಿದ್ದ ಬಾಕ್ಸ್ ಆಫೀಸ್‌ ಕಲೆಕ್ಷನ್‌ನ್ನು ಹಿಮ್ಮೆಟ್ಟಿಸಿರುವ ‘ಸಂಜು’, 38 ದಿನಗಳಲ್ಲಿ ಬರೋಬ್ಬರಿ 2.4 ದಶಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ಬಾಚಿದ್ದಾನೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾದಲ್ಲಿ ಹಿಂದಿ ಚಿತ್ರಗಳಿಗೆ ಹೆಚ್ಚಿನ ನೋಡುಗರಿದ್ದಾರೆ. ಅದರಲ್ಲೂ ರಾಜ್‌ಕುಮಾರ್‌ ಹಿರಾನಿ ಹಾಗೂ ರಣ್ಬೀರ್‌ ಕಪೂರ್‌ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಸುಮಾರು 60 ಸ್ಕ್ರೀನ್‌ಗಳಲ್ಲಿ ‘ಸಂಜು’ ಪ್ರದರ್ಶನ ಕಾಣುತ್ತಿದೆ.

‘ಸಂಜು’ ಚಿತ್ರ 38 ದಿನಗಳಲ್ಲಿ 2,409,125 ಆಸ್ಟ್ರೇಲಿಯನ್‌ ಡಾಲರ್‌ಗಳಷ್ಟು ಬಾಚಿಕೊಂಡಿದೆ. ಈವರೆಗೆ ಬಾಹುಬಲಿ-2 ಚಿತ್ರ ಅತ್ಯಧಿಕ ಗಳಿಕೆಯ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2,407,933 ಆಸ್ಟ್ರೇಲಿಯನ್‌ ಡಾಲರ್‌ಗಳು ‘ಬಾಹುಬಲಿ’ಗೆ ಸಿಕ್ಕಿತ್ತು. ಸಂಜು ಇದೀಗ ಹೊಸ ದಾಖಲೆ ಬರೆದಿದೆ.

ಈ ಬಗ್ಗೆ ತರನ್‌ ಆದರ್ಶ್‌ ಟ್ವಿಟರ್ ಮೂಲಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದು, ಮಾತ್ರವಲ್ಲದೆ ಅತ್ಯಧಿಕ ಸಂಪಾದನೆಯ ಹೆಗ್ಗಳಿಕೆಯ ಬಗ್ಗೆ ವಿವರ ಹಾಕಿದ್ದಾರೆ.
ನಟ ಸಂಜಯ್‌ ದತ್‌ ಬಗೆಗಿನ ಜೀವನದ ಕಥೆ ‘ಸಂಜು’ ಚಿತ್ರದ ಸಾರವಾಗಿದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...