alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಲೀಕ್ ಆಯ್ತು ‘ಸಂಜು’ ಚಿತ್ರ

ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಸಂಜು ಚಿತ್ರ ನೋಡಲು ಜನರು ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ರೆ ಇತ್ತ ಚಿತ್ರದ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಕಳೆದ 12 ಗಂಟೆಗಳಿಂದ ಫೇಸ್ಬುಕ್ ನಲ್ಲಿ ಅನೇಕರು ಸಂಜು ಚಿತ್ರ ವೀಕ್ಷಣೆ ಮಾಡಿದ್ದಾರೆ.

ಫೇಸ್ಬುಕ್ ನಲ್ಲಿ ಶುಕ್ರವಾರ ತಡರಾತ್ರಿ ಚಿತ್ರ ಅಪ್ಲೋಡ್ ಆಗಿದೆ. ಶನಿವಾರ ಇದು ವೈರಲ್ ಆಗಿದೆ. ಸಂಪೂರ್ಣ ಚಿತ್ರವನ್ನು ಫೇಸ್ಬುಕ್ ನಲ್ಲಿ ವ್ಯಕ್ತಿಯೊಬ್ಬ ಅಪ್ಲೋಡ್ ಮಾಡಿದ್ದಾನೆ. ಚಿತ್ರದ ವಿಡಿಯೋ ಡಿಲೀಟ್ ಆಗುವವರೆಗೆ ನಕಲಿ ಪ್ರತಿಯನ್ನು ಸುಮಾರು 2.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ಈ ಪೋಸ್ಟನ್ನು 16 ಸಾವಿರಕ್ಕೂ ಹೆಚ್ಚು ಬಾರಿ ರಿಪೋಸ್ಟ್ ಮಾಡಲಾಗಿದೆ. ಚಿತ್ರವನ್ನು ಅಪ್ಲೋಡ್ ಮಾಡಿದ್ದ ವ್ಯಕ್ತಿ ಫೇಸ್ಬುಕ್ ಅಕೌಂಟ್ ನಿಂದ ಚಿತ್ರವನ್ನು 4.20 ರ ಸುಮಾರಿಗೆ ಡಿಲೀಟ್ ಮಾಡಲಾಗಿದೆ. ಇದಕ್ಕೂ ಮೊದಲೇ ಚಿತ್ರ ವೈರಲ್ ಆಗಿತ್ತು. ಚಿತ್ರವನ್ನು ಹೇಗೆ ಡಿಲೀಟ್ ಮಾಡಲಾಗಿದೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಮೆಕ್ಕಾದ ವ್ಯಕ್ತಿ ಈ ನಕಲಿ ಕಾಪಿಯನ್ನು ಅಪ್ಲೋಡ್ ಮಾಡಿದ್ದಾನೆ ಎನ್ನಲಾಗಿದೆ. ಆತನ ಫೇಸ್ಬುಕ್ ಅಕೌಂಟ್ ಮಾನ್ಯತೆ ಪಡೆದಿಲ್ಲವೆಂದೂ ಮೂಲಗಳು ಹೇಳಿವೆ. ಸಂಜು ಚಿತ್ರ ಶುಕ್ರವಾರ ತೆರೆಗೆ ಬಂದಿದೆ. ಚಿತ್ರ ಮೊದಲ ದಿನವೇ ದಾಖಲೆ ಪ್ರಮಾಣದಲ್ಲಿ ಗಳಿಕೆ ಕಂಡಿದೆ. ಆದ್ರೆ ಈ ಬೆಳವಣಿಗೆ ಚಿತ್ರದ ಗಳಿಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...