alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆ ಮಲಗಿದ್ದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಜೀವನ ಚರಿತ್ರೆ ಸಂಜು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ 341 ಕೋಟಿ ಗಳಿಕೆ ಕಂಡಿದೆ. ಚಿತ್ರದಲ್ಲಿ ಸಂಜಯ್ ದತ್ (ರಣಬೀರ್ ಕಪೂರ್) ಹಾಗೂ ಸ್ನೇಹಿತ ಕಮಲೇಶ್ (ವಿಕ್ಕಿ) ಸ್ನೇಹವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸಂಜು ಚಿತ್ರದಲ್ಲಿ ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆ ಸಂಜು ಸಂಬಂಧ ಬೆಳೆಸಿದ್ದ ದೃಶ್ಯವನ್ನು ತೋರಿಸಲಾಗಿದೆ.

ಈ ದೃಶ್ಯದ ಬಗ್ಗೆ ಸಂಜಯ್ ದತ್ ಸ್ನೇಹಿತ ಪರೇಶ್ ಗಿಲಾನಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರೇಶ್, ಯಸ್….ಹೀಗೆ ಆಗಿತ್ತು. ನಾನು ಸಿನಿಮಾ ನೋಡುವವರೆಗೂ ಈ ಬಗ್ಗೆ ಯಾವುದೇ ಪ್ರಶ್ನೆಯನ್ನು ಸಂಜಯ್ ಗೆ ಕೇಳಿರಲಿಲ್ಲ. ಚಿತ್ರದಲ್ಲಿ ತೋರಿಸಿದ ದೃಶ್ಯ ನಿಜ. ನಾನೊಬ್ಬ ಹುಡುಗಿಯನ್ನು ಪ್ರೀತಿ ಮಾಡ್ತಿದ್ದೆ ಎಂದು ಪರೇಶ್ ಹೇಳಿದ್ದಾರೆ.

ಮುಂಬೈ ದಾಳಿ ನಂತ್ರ ಸಂಜಯ್ ದತ್ ಜೊತೆ ಮಾತನಾಡುವುದನ್ನು ಬಿಟ್ಟಿದ್ದೆ. ಭೇಟಿಯಾಗಿ ಮಾತನಾಡುತ್ತಿರಲಿಲ್ಲ. ಫೋನ್ ನಲ್ಲಿ ಮಾತ್ರ ಮಾತನಾಡ್ತಿದ್ದೆ. ಸಂಜಯ್ ಜೈಲಿನಿಂದ ಹೊರಗೆ ಬರುವ ವೇಳೆ ನಾನು ಅಲ್ಲಿಯೇ ಇದ್ದೆ ಎಂದು ಪರೇಶ್ ಹೇಳಿದ್ದಾರೆ.

ಚಿತ್ರ ನೋಡಿದ ನಂತ್ರ ತುಂಬಾ ಭಾವುಕರಾಗಿದ್ದ ಪರೇಶ್, ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಸಂಜಯ್ ದತ್ ಸಾಕಷ್ಟು ನೋವನುಭವಿಸಿದ್ದಾರೆ. ಎಂಥ ಕಷ್ಟದಲ್ಲಿಯೂ ನಾವೆಲ್ಲರೂ ಒಂದಾಗಿದ್ದೆವು. ನನ್ನ ಜೀವನದ ಒಂದು ಭಾಗವಾದ ಸಂಜಯ್ ಗೆ ಧನ್ಯವಾದ ಎಂದು ಪೋಸ್ಟ್ ಹಾಕಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...