alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ-ಪದ್ಮಾವತ್ ದಾಖಲೆ ಸರಿಗಟ್ಟಿ `ಸಂಜು’ 3 ದಿನದಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ಸಂಜಯ್ ದತ್ ಜೀವನಚರಿತ್ರೆ ಆಧಾರಿತ ‘ಸಂಜು’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧಮಾಲ್ ಮಾಡ್ತಿದೆ. ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿರುವ ಚಿತ್ರ ಇತಿಹಾಸ ರಚಿಸಿದೆ. ಹಿಂದಿ ಸಿನಿಮಾದ ಯಾವುದೇ ಚಿತ್ರ ಈವರೆಗೆ ಮಾಡದ ದಾಖಲೆಯನ್ನು ಸಂಜು ಮಾಡಿದೆ.

ರಣಬೀರ್ ಕಪೂರ್ ಅಭಿನಯದ ಸಂಜು ಚಿತ್ರ ಒಂದೇ ದಿನದಲ್ಲಿ ಬಾಹುಬಲಿ ದಾಖಲೆಯನ್ನು ಸರಿಗಟ್ಟಿದೆ. ಬಾಹುಬಲಿ ಮೂರನೇ ದಿನ 46.50 ಕೋಟಿ ಗಳಿಕೆ ಕಂಡಿತ್ತು. ಸಂಜು ಮೂರನೇ ದಿನ 46.71 ಕೋಟಿ ಗಳಿಕೆ ಕಂಡು ಬಾಹುಬಲಿ ದಾಖಲೆ ಮುರಿದಿದೆ. ಮೂರು ದಿನದಲ್ಲಿ ಚಿತ್ರ 120 ಕೋಟಿ ಗಳಿಕೆ ಕಂಡು 100 ಕೋಟಿ ಕ್ಲಬ್ ಸೇರಿದೆ.

ಆರಂಭಿಕ ವಾರಾಂತ್ಯದ ಗಳಿಕೆಯಲ್ಲಿ ರೇಸ್-3 ದಾಖಲೆ ಮುರಿದಿದ್ದ ಸಂಜು ವರ್ಷದ ಅತ್ಯಂತ ಭರ್ಜರಿ ಆರಂಭದ ಚಿತ್ರ ಪದ್ಮಾವತ್ ದಾಖಲೆಯನ್ನೂ ಮುರಿದಿದೆ. ಪದ್ಮಾವತ್ ಮೊದಲ ವಾರಾಂತ್ಯದಲ್ಲಿ 114 ಕೋಟಿ ಗಳಿಕೆ ಕಂಡಿತ್ತು. ಸಂಜು 120.06 ಕೋಟಿ ಗಳಿಸಿದೆ.

ಸಂಜು ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಭರ್ಜರಿ ಗಳಿಕೆ ಕಾಣ್ತಿದೆ. ಆಸ್ಟ್ರೇಲಿಯಾದಲ್ಲಿ ಸಂಜು ಚಿತ್ರಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಸಂಜಯ್ ದತ್ ಪಾತ್ರದಲ್ಲಿ ಮಿಂಚಿರುವ ರಣಬೀರ್ ಕಪೂರ್ ಅಭಿನಯಕ್ಕೆ ಎಲ್ಲಡೆಯಿಂದ ಮುಚ್ಚುಗೆ ವ್ಯಕ್ತವಾಗ್ತಿದೆ. ಸಲ್ಮಾನ್, ಅಮಿರ್ ಸೇರಿದಂತೆ ಕಲಾವಿದರು ರಣಬೀರ್ ಅಭಿನಯವನ್ನು ಹಾಡಿ ಹೊಗಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...