alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗಾಗಿಸುತ್ತೆ ‘ಸಂಜು’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್

ಸಂಜಯ್ ದತ್ ಜೀವನಾಧಾರಿತ ಚಿತ್ರ ‘ಸಂಜು’ ಬಾಕ್ಸ್ ಆಫೀಸ್ ಗಳಿಕೆ ಬಾಲಿವುಡ್ ಪಂಡಿತರನ್ನು ನಿಬ್ಬೆರಗಾಗಿಸಿದೆ. ಜೂನ್ 29 ಕ್ಕೆ ಬಿಡುಗಡೆಯಾದ ಈ ಚಿತ್ರ ಈವರೆಗೆ 500 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.

ಬಿಡುಗಡೆಯಾದ ಮೊದಲ ದಿನವೇ 34.75 ಕೋಟಿ ರೂ. ಗಳಿಸಿದ್ದ ಈ ಚಿತ್ರ, ವಾರಾಂತ್ಯಕ್ಕೆ 100 ಕೋಟಿ ಕ್ಲಬ್ ಸೇರಿತ್ತು. ಬಿಡುಗಡೆಯಾಗಿ 15 ದಿನಗಳು ಕಳೆದರೂ ಪ್ರೇಕ್ಷಕರು ಮುಗಿ ಬಿದ್ದು ಚಿತ್ರ ವೀಕ್ಷಿಸುತ್ತಿದ್ದಾರೆ.

ರಾಜಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಂಜಯ್ ದತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇತರೆ ಪ್ರಮುಖ ಪಾತ್ರಗಳಲ್ಲಿ ಅನುಷ್ಕಾ ಶರ್ಮಾ, ಸೋನಂ ಕಪೂರ್, ಪರೇಶ್ ರಾವಲ್, ವಿಕ್ಕಿ ಕೌಶಲ್, ದಿಯಾ ಮಿರ್ಜಾ, ಮನಿಷಾ ಕೊಯಿರಾಲಾ ಮೊದಲಾದವರು ಕಾಣಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...