alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜು ಚಿತ್ರದ ಈವರೆಗಿನ ಗಳಿಕೆ ಕೇಳಿದ್ರೆ ದಂಗಾಗ್ತೀರಾ…!

ನಟ ಸಂಜಯ್‌ ದತ್‌ ಜೀವನ ಕಥೆಯನ್ನು ಒಳಗೊಂಡಿರುವ ರಣಬೀರ್‌ ಕಪೂರ್‌ ನಟನೆಯ ಸಂಜು ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸುವ ಭರದಲ್ಲಿದೆ.

ಸಲ್ಮಾನ್‌ ಖಾನ್‌ ಹಾಗೂ ಕತ್ರಿನಾ ಕೈಫ್‌ ಅಭಿನಯದ ‘ಟೈಗರ್‌ ಜಿಂದಾ ಹೈ’ ಚಿತ್ರದ ಗಳಿಕೆಯನ್ನೂ ಮೀರಿಸಿರುವ ರಾಜ್‌ಕುಮಾರ್‌ ಹಿರಾನಿ ಅವರ ಸಂಜು ಚಿತ್ರ, 33 ದಿನಗಳಿಂದ ಬಾಲಿವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ. ಸಂಜು ಚಿತ್ರದ ಈವರೆಗಿನ ಗಳಿಕೆ 339.93 ಕೋಟಿ ರೂ.

ಈ ಹಿಂದೆ ರಾಜ್‌ಕುಮಾರ್‌ ಹಿರಾನಿ ಅವರ ಅಮೀರ್ ಖಾನ್ ಅಭಿನಯದ ಪಿಕೆ ಚಿತ್ರ 340.8 ಕೋಟಿ ರೂ. ಗಳಿಸಿದ್ದು, ಈ ದಾಖಲೆಯನ್ನು ಅವರದೇ ಚಿತ್ರ ಮುರಿಯುವ ಎಲ್ಲ ಲಕ್ಷಣ ಗೋಚರಿಸಿದೆ.

ಸಂಜಯ್‌ ದತ್‌ ಜೀವನದ ವಿವಿಧ ಮುಖಗಳನ್ನು ಚಿತ್ರದಲ್ಲಿ ರಣಬೀರ್‌ ಕಪೂರ್‌ ಮೂಲಕ ತೆರೆಗೆ ತರಲಾಗಿದ್ದು, ಜೈಲು ವಾಸ ಇತ್ಯಾದಿ ಕಾನೂನು ಹೋರಾಟಗಳನ್ನೂ ತೋರಿಸಲಾಗಿದೆ.

ದೇಶಾದ್ಯಂತ ಸಿನಿಮಾದ ಪರಿಕಲ್ಪನೆ ಹಾಗೂ ನಟನೆಗೆ ಪ್ರಶಂಸೆ ವ್ಯಕ್ತವಾಗಿದ್ದರೆ, ಇನ್ನೊಂದು ಕಡೆಯಿಂದ ಟೀಕೆಯೂ ಕೇಳಿ ಬಂದಿದೆ. ಆದರೆ ಅನೇಕ ಮಾಧ್ಯಮಗಳಿಂದ ಸಂಜುಗೆ ಉತ್ತಮ ಅಂಕವೂ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...