alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗದಲ್ಲಿ ಹೊಸತನ ಹುಟ್ಟು ಹಾಕಿದ್ದಾರೆ ಕನ್ನಡದ ನಟಿ

ಯೋಗ ಕೂಡ ಈಗ ಒಂದು ಕಲೆಯಾಗಿ ಮಾರ್ಪಟ್ಟಿದೆ. ಕನ್ನಡದ ನಟಿ ಸಂಜನಾ ಯೋಗಾಸನದಲ್ಲಿ ನಾವೀನ್ಯತೆಯನ್ನು ಹುಟ್ಟುಹಾಕಿದ್ದಾರೆ. ಕಳೆದ 2 ವರ್ಷಗಳಿಂದ ಬೆಂಗಳೂರಿನ ಕೋರಮಂಗಲದಲ್ಲಿ ಯೋಗ ಅಕಾಡೆಮಿಯೊಂದನ್ನು ನಡೆಸ್ತಿದ್ದಾರೆ.

ಇದೀಗ ಸಂಜನಾ ಮತ್ತವರ ಅಕಾಡೆಮಿಯಲ್ಲಿರೋ ಬೋಧಕರು ಹೊಸಬಗೆಯ ಯೋಗವನ್ನು ಕಲಿಸಿಕೊಡ್ತಿದ್ದಾರೆ. ಅದರ ಹೆಸರು ಯೋಗ ವಿತ್ ಸ್ಟಿಕ್ಸ್. ನಮ್ಮ ದೇಹದ ಫ್ಲೆಕ್ಸಿಬಿಲಿಟಿ ಮತ್ತು ತಾಕತ್ತಿಗೆ ಸವಾಲು ಹಾಕುವಂತಿವೆ ಈ ಹೊಸ ಬಗೆಯ ಆಸನಗಳು.

ಯೋಗ ವಿತ್ ಸ್ಟಿಕ್ಸ್ ನಲ್ಲಿ ಹಿಡಿತ ಸಾಧಿಸಲು ಕನಿಷ್ಟ 8-10 ತರಗತಿಗಳಿಗೆ ಹಾಜರಾಗಲೇಬೇಕು. ಈಗಷ್ಟೆ ಯೋಗ ಕಲಿಯಲು ಆರಂಭಿಸಿರುವವರು ಇದನ್ನು ಮಾಡುವುದು ಕಷ್ಟ. ಬ್ರಿಕ್ ಯೋಗ, ಯೋಗ ವಿತ್ ಸ್ಟಿಕ್ಸ್ ಅಥವಾ ದಂಡ ಯೋಗ ದೇಹವನ್ನು ಹುರಿಗೊಳಿಸಲು ಅತ್ಯಂತ ಉತ್ತಮವಾದ ವ್ಯಾಯಾಮ.

ಯೋಗವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಇಚ್ಛಿಸುವವರು ಕೂಡ ಇಲ್ಲಿ ಅಭ್ಯಾಸ ಮಾಡಬಹುದು. ಇಲ್ಲಿ ಯೋಗ ಕಲಿತ ಎಷ್ಟೋ ಮಂದಿ ಅದನ್ನೇ ವೃತ್ತಿಯನ್ನಾಗಿ ಆಯ್ದುಕೊಂಡಿದ್ದಾರಂತೆ. ಯೋಗ ಕಲಿಯಲು ವಯಸ್ಸಿನ ಹಂಗಿಲ್ಲ. ಆಸಕ್ತಿ ಇರಬೇಕು ಅಷ್ಟೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...