alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ಬಾಹುಬಲಿ ದಾಖಲೆ ಮುರಿಯಲಿದೆ ಪದ್ಮಾವತಿ

ಸಂಜಯ್ ಲೀಲಾ ಬನ್ಸಾಲಿಯ  ಪದ್ಮಾವತಿ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದೆ. ಹಾಗೆ ಬಿಡುಗಡೆಗೂ ಮುನ್ನವೇ ಚಿತ್ರ ದಾಖಲೆ ಬರೆಯಲು ಸಜ್ಜಾಗಿದೆ. ಸೂಪರ್ ಹಿಟ್ ಚಿತ್ರ ಬಾಹುಬಲಿ ಹಾಗೂ ದಂಗಲ್ ಚಿತ್ರವನ್ನು ಪದ್ಮಾವತಿ ಈ ವಿಷ್ಯದಲ್ಲಿ ಹಿಂದಿಕ್ಕಲಿದೆ. ಪದ್ಮಾವತಿ ಚಿತ್ರ ಡಿಸೆಂಬರ್ 1ರಂದು 150 ದೇಶಗಳಲ್ಲಿ  ತೆರೆ ಕಾಣಲಿದೆ.

180 ಕೋಟಿ ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರ ಡಿಸೆಂಬರ್ 1ರಂದು ಭಾರತದಲ್ಲಿ 4500 ಸ್ಕ್ರೀನ್ ನಲ್ಲಿ ತೆರೆಗೆ ಬರಲಿದೆ. ಮೂಲಗಳ ಪ್ರಕಾರ ಚಿತ್ರವನ್ನು 150 ದೇಶಗಳಲ್ಲಿ ಬಿಡುಗಡೆ ಮಾಡಲು ಎಲ್ಲ ತಯಾರಿ ನಡೆದಿದೆ. ಒಂದು ವೇಳೆ ಚಿತ್ರ 150 ದೇಶಗಳಲ್ಲಿ ತೆರೆ ಕಂಡಲ್ಲಿ ಬಾಹುಬಲಿ-2 ಹಾಗೂ ದಂಗಲ್ ದಾಖಲೆಯನ್ನು ಚಿತ್ರ ಮುರಿಯಲಿದೆ.

ಅಮೆರಿಕಾ,ಯುಕೆ,ಸಿಂಗಾಪೂರ್,ಮಲೇಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಚೀನಾದಲ್ಲೂ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕೆಲ ದಿನಗಳ ಹಿಂದಷ್ಟೇ ಪದ್ಮಾವತಿಯ ಹಾಡೊಂದು ಬಿಡುಗಡೆಯಾಗಿದ್ದು,ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದ್ರೆ ಗುಜರಾತ್ ಚುನಾವಣೆ ನಂತ್ರ ಚಿತ್ರ ಬಿಡುಗಡೆ ಮಾಡಬೇಕೆಂದು ಬಿಜೆಪಿ ಒತ್ತಾಯಿಸಿದ್ದು,ಡಿಸೆಂಬರ್ 1ರಂದು ಚಿತ್ರ ತೆರೆಗೆ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...