alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ 6 ವರ್ಷ ಒಂದಾಗಿರಲಿದ್ದಾರೆ ದೀಪಿ-ರಣವೀರ್

ಸಂಜಯ್ ಲೀಲಾ ಬನ್ಸಾಲಿ ಈವರೆಗೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಮೂರು ಸೂಪರ್ ಹಿಟ್ ಚಿತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಪದ್ಮಾವತ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ. ಈ ಸೂಪರ್ ಹಿಟ್ ಜೋಡಿ ತೆರೆ ಮೇಲೆ ಮೋಡಿ ಮಾಡಿದ್ದು ಸಂಜಯ್ ಲೀಲಾ ಬನ್ಸಾಲಿ ಮತ್ತೊಂದಿಷ್ಟು ಹಣ ಬಾಚಿಕೊಳ್ಳುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಸಂಜಯ್ ಲೀಲಾ ಬನ್ಸಾಲಿ, ರಣವೀರ್ ಹಾಗೂ ದೀಪಿಕಾ ಜೊತೆ ಮತ್ತೆ ಮೂರು ಚಿತ್ರಗಳನ್ನು ಮಾಡಲಿದ್ದಾರಂತೆ. ಹೀಗಾಗೇ ಒಪ್ಪಂದಕ್ಕೆ ಇಬ್ಬರ ಸಹಿ ಬಿದ್ದಿದೆ ಎನ್ನಲಾಗ್ತಿದೆ. ದೀಪಿ ಹಾಗೂ ರಣವೀರ್ ನಟನೆಯೊಂದೇ ಅಲ್ಲ ಅವರು ಕೆಲಸಕ್ಕೆ ನೀಡುವ ಮಹತ್ವ ಸಂಜಯ್ ಮನಸ್ಸು ಕದ್ದಿದೆಯಂತೆ.

ಒಂದು ವೇಳೆ ಈ ಸುದ್ದಿ ಸತ್ಯವಾದ್ರೆ ಸರಿ ಸುಮಾರು 6 ವರ್ಷಗಳ ಕಾಲ ರಣವೀರ್ ಹಾಗೂ ದೀಪಿಕಾ ಸಂಜಯ್ ಜೊತೆ ಕೆಲಸ ಮಾಡಬೇಕಾಗುತ್ತದೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸಂಜಯ್ ಲೀಲಾ ಬನ್ಸಾಲಿ ರಣವೀರ್ ಹಾಗೂ ದೀಪಿಕಾಳನ್ನು ಹಾಡಿ ಹೊಗಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...