alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಯುವ ಮುನ್ನ ಈಕೆ ಮಾಡಿದ ಕೆಲಸ ಕಂಡು ಸಂಜಯ್ ದತ್ ಗೆ ಶಾಕ್

ತಮ್ಮಿಷ್ಟದ ಕಲಾವಿದರನ್ನು ಹುಚ್ಚರಂತೆ ಪ್ರೀತಿ ಮಾಡುವ, ಆರಾಧಿಸುವ ಅಭಿಮಾನಿಗಳಿದ್ದಾರೆ. ನೆಚ್ಚಿನ ನಟ/ನಟಿಯರಿಗಾಗಿ ಪ್ರಾಣ ಬಿಡಲೂ ಕೆಲವರು ಸಿದ್ಧರಿರ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ತನ್ನೆಲ್ಲ ಆಸ್ತಿಯನ್ನು ಬಾಲಿವುಡ್ ನಟ ಸಂಜಯ್ ದತ್ ಹೆಸರಿಗೆ ಬರೆದಿದ್ದಾಳೆ.

ನಿಶಾ ಹೆಸರಿನ ಮಹಿಳೆಗೆ ಸಂಜಯ್ ದತ್ ಎಂದ್ರೆ ಅಚ್ಚುಮೆಚ್ಚಾಗಿತ್ತಂತೆ. ಸಾಯುವ ಮುನ್ನ ನಿಶಾ ಬ್ಯಾಂಕ್ ಲಾಕರ್ ಹಾಗೂ ತನ್ನೆಲ್ಲ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಮಾಡಿದ್ದಾಳೆ. ಸಂಜಯ್ ದತ್ ಗೆ ಈ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ಮಾಹಿತಿ ಸಿಗುವ ವೇಳೆಗೆ ನಿಶಾ ಸಾವನ್ನಪ್ಪಿದ್ದಳು. ನಂತ್ರ ಸಂಜಯ್ ದತ್ ಬ್ಯಾಂಕ್ ಆಫ್ ಬರೋಡಾಗೆ ಪತ್ರ ಬರೆದಿದ್ದಾರೆ. ಮಹಾಬಲೇಶ್ವರದಲ್ಲಿರುವ ನಿಶಾ ಕುಟುಂಬಸ್ಥರಿಗೆ ಬ್ಯಾಂಕ್ ಲಾಕರ್ ಹಾಗೂ ಆಸ್ತಿ ನೀಡುವಂತೆ ಮನವಿ ಮಾಡಿದ್ದಾರೆ.

ಕಾನೂನು ಪ್ರಕ್ರಿಯೆ ಹಿನ್ನೆಲೆಯಲ್ಲಿ ನಿಶಾ ಬ್ಯಾಂಕ್ ಲಾಕರ್ ಇನ್ನೂ ತೆಗೆದಿಲ್ಲ. ಸಂಜಯ್ ದತ್ ನನಗೆ ಆಸ್ತಿ ಬೇಡವೆಂದು ಸ್ಪಷ್ಟಪಡಿಸಿದ್ದಾರೆ. ನಿಶಾ ಕುಟುಂಬಸ್ಥರಿಗೂ ಈ ಬಗ್ಗೆ ಮಾಹಿತಿಯಿರಲಿಲ್ಲವಂತೆ. ವಿಷ್ಯ ತಿಳಿದ ನಂತ್ರ ಅವ್ರೂ ಶಾಕ್ ಗೊಳಗಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...