alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಲ್ಲಿ ಅಬ್ಬರಿಸಲಿದೆ ಸಂಜಯ್ ದತ್ ಚಿತ್ರಗಳು

sanjay-dutt_1456467266

ಯರವಾಡ ಜೈಲಿನಿಂದ ವಾಪಸ್ ಆಗಿರುವ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಗೆ ಬಾಲಿವುಡ್ ಅದ್ಧೂರಿ ಸ್ವಾಗತ ಕೋರಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೆಲ್ ಕಂ ಮಾಡಿದ್ರೆ, ಮತ್ತೆ ಕೆಲವರು ಮನೆಗೆ ಹೋಗಿ ವಿಶ್ ಮಾಡಿದ್ದಾರೆ. ಸಂಜಯ್ ದತ್ ಮನೆ ತಲುಪುತ್ತಿದ್ದಂತೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಶಕ್ತಿ ಕಪೂರ್, ಸಂಜಯ್ ಗುಪ್ತಾ ಮತ್ತು ವಿಧು ವಿನೋದ್ ಚೋಪ್ರಾ, ದತ್ ಮನೆಗೆ ಧಾವಿಸಿದ್ದರು.

ಜೈಲು ಶಿಕ್ಷೆ ಮುಗಿಸಿ ಬಂದಿರುವ ಸಂಜಯ್ ಕೈನಲ್ಲೀಗ 7 ಚಿತ್ರಗಳಿವೆ. ಇದಕ್ಕಾಗಿ 350 ಕೋಟಿ ಹಣ ಹೂಡಲಾಗಿದೆಯಂತೆ. ಶೋರ್, ಮುನ್ನಾಭಯಿ ಚಲೇ ಅಮೆರಿಕಾ, ಹಸ್ಮುಖ್ ಪಿಗಲ್ ಗಯಾ ಚಿತ್ರಗಳು ಬಾಕಿ ಇವೆ. ಇಷ್ಟಲ್ಲದೇ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ ಆಕ್ಷನ್ ಫಿಲ್ಮ್ ಗೆ ಸಹಿ ಮಾಡಿದ್ದಾರೆ ಸಂಜಯ್.

ರಾಜ್ಕುಮಾರ್ ಹಿರಾನಿ ಜೀವನಚರಿತ್ರೆಯನ್ನು ಕೂಡ ಮಾಡ್ತಿದ್ದಾರೆ. ಮಾಹಿತಿ ಪ್ರಕಾರ ಸಂಜಯ್ ಬಳಿ ಮತ್ತೆರಡು ಪ್ರಾಜೆಕ್ಟ್ ಬೇರೆ ಇದೆ. ಅದರ ಶೂಟಿಂಗ್ ಸದ್ಯದಲ್ಲಿಯೇ ಶುರುವಾಗಲಿದೆ. ಒಟ್ಟಿನಲ್ಲಿ ಜೈಲಿನಿಂದ ಬಂದಿರುವ ಸಂಜಯ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳಿಗೆ ಒಂದಾದ ನಂತ್ರ ಒಂದು ಫಿಲ್ಮ್ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...