alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಜೈಲು ಸೇರ್ತಾರಾ ಸಂಜಯ್ ದತ್…?

sanjay-story-size-650_010715124823

ನಟ ಸಂಜಯ್ ದತ್ ಮತ್ತೆ ಜೈಲು ಸೇರುವ ಆತಂಕ ಎದುರಾಗಿದೆ. ನಿಯಮ ಮೀರಿ ಸಂಜಯ್ ದತ್ ರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿದ್ದೇ ಆದಲ್ಲಿ ಮತ್ತೆ ಜೈಲಿಗೆ ಕಳುಹಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. 2016ರ ಫೆಬ್ರವರಿಯಲ್ಲಿ ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಕಾರಾಗೃಹದಲ್ಲಿದ್ದಾಗ ದತ್ ಪದೇ ಪದೇ ಪೆರೋಲ್ ಪಡೆಯುತ್ತಿದ್ರು. ಹಾಗಾಗಿ ಅವರು ಅವಧಿ ಪೂರ್ಣಗೊಳಿಸಿಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮಹಾರಾಷ್ಟ್ರ ಹೈಕೋರ್ಟ್ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.

ದತ್ ರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿರೋದಾಗಿ ಸರ್ಕಾರ ಹೇಳಿತ್ತು. ಸನ್ನಡತೆಯ ಮಾನದಂಡಗಳ ಬಗ್ಗೆ ವಿವರಿಸಿ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರ, ದತ್ ಬಿಡುಗಡೆಯಲ್ಲಿ ನಿಯಮ ಉಲ್ಲಂಘಿಸಿದ್ದೇ ಆದ್ರೆ ಮತ್ತೆ ಜೈಲಿಗೆ ಕಳಿಸುವುದಾಗಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...