alex Certify
ಕನ್ನಡ ದುನಿಯಾ       Mobile App
       

Kannada Duniya

‘ಶೂಟಿಂಗ್ ವೇಳೆ ಅಮ್ಮ ಎನ್ನುತ್ತಾ ರಾತ್ರಿ ಸೆಕ್ಸ್ ಗೆ ಬಲವಂತ’

ಹೈದರಾಬಾದ್: ನಟಿ ಶ್ರೀ ರೆಡ್ಡಿ ಕಾಸ್ಟಿಂಗ್ ಕೌಚ್ ಕುರಿತಾಗಿ ಧ್ವನಿ ಎತ್ತಿದ್ದೆ ತಡ, ತೆಲುಗು ಚಿತ್ರರಂಗದಲ್ಲಿ ನೊಂದ ಅನೇಕ ನಟಿಯರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.

ನಟಿ ಸಂಧ್ಯಾ ನಾಯ್ಡು ಅವರಿಗೆ ಚಿತ್ರೀಕರಣದ ವೇಳೆಯಲ್ಲಿ ಅಮ್ಮ ಎಂದು ಕರೆಯುವ ಕೆಲ ನಿರ್ದೇಶಕರು ರಾತ್ರಿ ಹಾಸಿಗೆ ಹಂಚಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಇದನ್ನು ಸಂಧ್ಯಾ ನಾಯ್ಡು ಅವರೇ ಹೇಳಿಕೊಂಡಿದ್ದಾರೆ.

ನಡುರಸ್ತೆಯಲ್ಲೇ ಅರೆಬೆತ್ತಲಾಗಿ ಕಾಸ್ಟಿಂಗ್ ಕೌಚ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಟಿ ಶ್ರೀ ರೆಡ್ಡಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಸ್ತಾಪಿಸಿ, ಇದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ದಶಕದಿಂದ ಚಿತ್ರರಂಗದಲ್ಲಿರುವ ಸಂಧ್ಯಾ ಅವರಿಗೆ ಶೂಟಿಂಗ್ ಮುಗಿದ ನಂತರವೂ ವಾಟ್ಸಾಪ್ ನಲ್ಲಿ ಚಾಟಿಂಗ್ ಗೆ ಒತ್ತಾಯಿಸಲಾಗಿದೆ. ಯಾವ ರೀತಿಯ ಬಟ್ಟೆ ತೊಟ್ಟಿದ್ದೀರಿ? ಪಾರದರ್ಶಕವಾಗಿದೆಯಾ ಎಂದೆಲ್ಲಾ ಕೇಳಲಾಗಿದೆ.

ನಟಿ ಸುನಿತಾ ರೆಡ್ಡಿ ಮಾತನಾಡಿ, ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ಕ್ಯಾರವಾನ್ ಬಳಕೆಗೆ ಅವಕಾಶ ಇಲ್ಲ. ಬಯಲಿನಲ್ಲೇ ಬಟ್ಟೆಯನ್ನು ಬದಲಿಸಬೇಕಿದೆ. ನಮ್ಮನ್ನು ಕೀಳಾಗಿ ಕಾಣುತ್ತಾರೆ. ಅಶ್ಲೀಲವಾಗಿ ನಿಂದಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...