alex Certify
ಕನ್ನಡ ದುನಿಯಾ       Mobile App
       

Kannada Duniya

ಹಿರಿಯ ನಟಿಯನ್ನು ವಂಚಿಸಿದ ಸ್ಯಾಂಡಲ್ ವುಡ್ ನಿರ್ದೇಶಕ

ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಬ್ಬ ಹಿರಿಯ ನಟಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತು ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಠಾರ, ಬದುಕು, ರಂಗೋಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ನಟಿ ಮಂಜುಳಮ್ಮ ವಂಚನೆಗೊಳದವರಾಗಿದ್ದು, ಯುವ ನಿರ್ದೇಶಕ ನವೀನ್ ರೈ ಎಂಬಾತ ಕಿರು ಚಿತ್ರ ನಿರ್ಮಿಸುವ ಸಲುವಾಗಿ ಮಂಜುಳಮ್ಮರಿಂದ 15 ಲಕ್ಷ ರೂ. ಸಾಲ ಪಡೆದು ಅದನ್ನು ವಾಪಸ್ ಮಾಡದೆ ಈಗ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಹಣ ಪಡೆದ ನವೀನ್ ತಿಂಗಳುಗಟ್ಟಲೆ ಸಂಪರ್ಕಕ್ಕೆ ಸಿಗದದಾಗ ಆತನನ್ನು ಹುಡುಕಿಕೊಂಡು ಹೋಗಿದ್ದು, ಈ ವೇಳೆ ಆತ ಮನೆ ಖಾಲಿ ಮಾಡಿಕೊಂಡು ಊರು ಬಿಟ್ಟಿರುವ ವಿಚಾರ ಬಹಿರಂಗವಾಗಿದೆ. ವಂಚನೆಗೊಳಗಾಗಿರುವ ಮಂಜುಳಮ್ಮ ಈಗ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...