alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡೇ ದಿನದಲ್ಲಿ ‘ಬಿಗ್ ಬಾಸ್’ ಮನ ಗೆದ್ದ ಸಮೀರಾಚಾರ್ಯ

‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳ ಕಲರವ ರಂಗೇರಿದೆ. ಕೆಲವರು ಉತ್ಸಾಹದಲ್ಲಿದ್ದರೆ, ಮತ್ತೆ ಕೆಲವರು ಡಲ್ ಆದವರಂತೆ ಇದ್ದಾರೆ. ಇದ್ದಿಲು ಒಲೆ, ಪೂಜಾ ಸಾಮಗ್ರಿಗಳಿಗಾಗಿ ಉಪವಾಸವಿದ್ದ ಸಮೀರಾಚಾರ್ಯ ಸದಸ್ಯರನ್ನು ಮಾತ್ರವಲ್ಲ, ‘ಬಿಗ್ ಬಾಸ್’ ಮನಸ್ಸನ್ನೂ ಗೆದ್ದಿದ್ದಾರೆ.

ನಿಯಮಾನುಸಾರ ಮನೆಯೊಳಗೆ ಇದ್ದಿಲು ಒಲೆ ಒಯ್ಯುವಂತಿರಲಿಲ್ಲ. ತಮಗೆ ಅವು ಬೇಕೆಂದು ಸಮೀರಾಚಾರ್ಯ ಒಂದು ಹನಿ ನೀರು ಸಹಾ ಕುಡಿಯದೇ ಉಪವಾಸ ವ್ರತ ಕೈಗೊಂಡಿದ್ದರು. ಅವರಿಗಾಗಿ ಮನೆಯವರು ಬೆಂಬಲ ನೀಡಿದ್ದಾರೆ. ಅವರೊಂದಿಗೆ ಸುಮಾ ಕೂಡ ಉಪವಾಸ ಮಾಡಿ, ಇದ್ದಿಲು ಒಲೆ, ಪೂಜಾ ಸಾಮಗ್ರಿ ಕೊಡುವಂತೆ ಮನವಿ ಮಾಡಿದ್ದಾರೆ.

ಸದಸ್ಯರೆಲ್ಲರ ಮನವಿ ಹಾಗೂ ಉಪವಾಸ ಸತ್ಯಾಗ್ರಹದಿಂದ ‘ಬಿಗ್ ಬಾಸ್’ ಮನ ಕರಗಿದೆ. ಮನೆಯೊಳಗಿನ ಸದಸ್ಯರು ಒಪ್ಪಿದಲ್ಲಿ ಸಮೀರಾಚಾರ್ಯರಿಗೆ ಅಗತ್ಯವಾದ ಸಾಮಗ್ರಿಗಳನ್ನು ಕೊಡುವುದಾಗಿ ‘ಬಿಗ್ ಬಾಸ್’ ಹೇಳಿದ್ದಾರೆ. ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಸದಸ್ಯರೆಲ್ಲರ ಕಾಳಜಿಗೆ ಭಾವುಕರಾದ ಸಮೀರಾಚಾರ್ಯ ಕೃತಜ್ಞತೆ ಸಲ್ಲಿಸಿದ್ದಾರೆ.

ಲಕ್ಸುರಿ ಬಜೆಟ್ ಟಾಸ್ಕ್ ‘ಉಳಿದವರು ಕಂಡಂತೆ’ಯಲ್ಲಿ ಮೊದಲ ಹಂತದ ಸವಾಲಾಗಿ ‘ಗುಟ್ಟೊಂದು ಹೇಳುವೆ’ ಸವಾಲ್ ನೀಡಲಾಗಿದ್ದು, ಸದಸ್ಯರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಫಲಕಗಳನ್ನು ಅನ್ವಯವಾಗುವ ಸದಸ್ಯರಿಗೆ ನೇತು ಹಾಕುವಾಗ, ಕೆಲವರಿಂದ ಅಸಮಾಧಾನ ವ್ಯಕ್ತವಾದರೂ, ಅದನ್ನು ತೋರಿಸಿಕೊಳ್ಳಲಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...