alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗಚೈತನ್ಯ-ಸಮಂತಾ ರಿಸೆಪ್ಷನ್ ಲುಕ್ ಗೆ ಫಿದಾ ಆದ ಫ್ಯಾನ್ಸ್

ನಾಗ ಚೈತನ್ಯ ಹಾಗೂ ಸಮಂತಾ ಈಗ ಟಾಲಿವುಡ್ ನ ಸ್ಟಾರ್ ಜೋಡಿ. ಕೇವಲ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫಲ್ಲೂ ಇಬ್ರೂ ಒಂದಾಗಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯರ ಮದುವೆಯಂತೂ ಅದ್ಧೂರಿಯಾಗಿ ನೆರವೇರಿತ್ತು.

ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಭರ್ಜರಿಯಾಗಿ ಹೊಸ ಬಾಳಿಗೆ ಅಡಿಯಿಟ್ಟಿದ್ದರು. ಇದೀಗ ಅವರ ವೆಡ್ಡಿಂಗ್ ರಿಸೆಪ್ಷನ್ ಫೋಟೋಗಳು ವೈರಲ್ ಆಗಿವೆ. ನಾಗಚೈತನ್ಯ ಕಪ್ಪು ಬಣ್ಣದ ಸೂಟ್ ನಲ್ಲಿ ಮಿಂಚಿದ್ರೆ, ಸಮಂತಾ ಸುಂದರವಾದ ಗೌನ್ ತೊಟ್ಟು ಕಂಗೊಳಿಸಿದ್ದಾರೆ.

ಈ ಜೋಡಿಯ ರಿಸೆಪ್ಷನ್ ಲುಕ್ ಅನ್ನು ಕೂಡ ಅಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ತಾರಾ ಜೋಡಿಯ ಲುಕ್ ಗೆ ಮ್ಯಾಚ್ ಆಗುವಂತೆ ವೇದಿಕೆಯನ್ನು ಕೂಡ ಬಿಳಿ ಮತ್ತು ನೇರಳೆ ಬಣ್ಣದ ಹೂವಿನಿಂದ ಅಲಂಕಾರ ಮಾಡಲಾಗಿತ್ತು.

ಸೆಲೆಬ್ರಿಟಿಗಳು, ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ರಿಸೆಪ್ಷನ್ ಗೆ ಬಂದಿದ್ರು. ದಾಂಪತ್ಯಕ್ಕೆ ಕಾಲಿಟ್ಟಿರೋ ಸಿನೆಮಾ ಜೋಡಿಗೆ ಹರಸಿ ಹಾರೈಸಿದ್ದಾರೆ. ಮದುವೆ ನಂತರ ಸಮಂತಾ ಹಾಗೂ ನಾಗಚೈತನ್ಯ ಹನಿಮೂನ್ ಗಾಗಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಗೆ ತೆರಳಿದ್ರು.

ಈಗ ಹೈದ್ರಾಬಾದ್ ನಲ್ಲಿ ರಿಸೆಪ್ಷನ್ ನೆರವೇರಿದೆ. ಸದ್ಯ ನಾಗಚೈತನ್ಯ ಸವ್ಯಸಾಚಿ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಸಮಂತಾ, ವಿಜಯ್ ನಾಯಕನಾಗಿ ನಟಿಸ್ತಾ ಇರೋ ಮರ್ಸಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...