alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಸ್ಟಾರ್ ಸರಳ ಮದುವೆಗೆ ಕೋಟಿ ಕೋಟಿ ಖರ್ಚು

ಟಾಲಿವುಡ್ ನ  ಸೂಪರ್ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ನಟಿ ಸಮಂತಾ ಹಾಗೂ ನಾಗಚೈತನ್ಯ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಸಿಂಪಲ್ ಆಗಿ ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಟಾಲಿವುಡ್ ಅಂಗಳದಲ್ಲಾಗ್ತಿದೆ.

ಅಕ್ಟೋಬರ್ 7ರಂದು ಗೋವಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮತ್ತೆ ಮದುವೆಯಾಗಲಿದ್ದಾರೆ. ನಂತ್ರ ಅಕ್ಟೋಬರ್ 9ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಮದುವೆಗೆ ಆಗಮಿಸುವ ಸಂಬಂಧಿಕರ ಪಟ್ಟಿಯಲ್ಲಿ ಕೇವಲ 100 ಜನರ ಹೆಸರು ಮಾತ್ರವಿದೆ. ಕುಟುಂಬಸ್ಥರು, ಹತ್ತಿರದ ಸಂಬಂಧಿಕರು ಹಾಗೂ ಕೆಲವೇ ಕೆಲವು ಸ್ನೇಹಿತರು ಮದುವೆಗೆ ಬರಲಿದ್ದಾರೆ.

ಹಿಂದೂ ಪದ್ಧತಿಯಂತೆ ನಡೆಯುವ ಮದುವೆಯಲ್ಲಿ ಸಮಂತಾ, ನಾಗ ಚೈತನ್ಯ ಅಜ್ಜಿಯ ಸೀರೆಯುಡಲಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದ ಮದುವೆಗಾಗಿ ವಿಶೇಷ ಡಿಸೈನ್ ಡ್ರೆಸ್ ಸಿದ್ಧಪಡಿಸಲಾಗಿದೆ. ಮದುವೆ, ರಿಸೆಪ್ಷನ್ ನಂತ್ರ ಜೋಡಿ ನ್ಯೂಯಾರ್ಕ್ ಗೆ ಹನಿಮೂನ್ ಗೆ ತೆರಳಲಿದ್ದಾರೆ. ಸಿಂಪಲ್ ಮದುವೆಗೆ ಜೋಡಿ ಸುಮಾರು 10 ಕೋಟಿ ಖರ್ಚು ಮಾಡಲಿದೆ ಎಂದು ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...