alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಂತಾ-ನಾಗ ಚೈತನ್ಯ ಹನಿಮೂನ್ ಫೋಟೋ ವೈರಲ್

ದಕ್ಷಿಣದ ಪ್ರಸಿದ್ಧ ನಟಿ ಸಮಂತಾ ದೀರ್ಘಕಾಲದ ಗೆಳೆಯ ನಾಗ ಚೈತನ್ಯರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆ ಈ ವರ್ಷದ ಗ್ರ್ಯಾಂಡ್ ವೆಡ್ಡಿಂಗ್ ನಲ್ಲಿ ಒಂದು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಸಮಂತಾ-ನಾಗ ಚೈತನ್ಯ ಹನಿಮೂನ್ ಫೋಟೋ ವೈರಲ್ ಆಗಿದೆ.

ಸಮಂತಾ –ನಾಗ ಚೈತನ್ಯ ಜೋಡಿ ಹನಿಮೂನ್ ಗಾಗಿ ಲಂಡನ್ ಗೆ ತೆರಳಿದ್ದಾರೆ. ಲಂಡನ್ ನಲ್ಲಿರುವ ಫೋಟೋವೊಂದನ್ನು ಸಮಂತಾ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸಮಂತಾ ಫೋಟೋ ಪೋಸ್ಟ್ ಮಾಡ್ತಿದ್ದಂತೆ ಫೋಟೋ ವೈರಲ್ ಆಗಿದೆ. ಸಮಂತಾ ಫೋಟೋಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ ಅಕ್ಟೋಬರ್ 6ರಂದು ನಾಗ ಚೈತನ್ಯ ಕೈ ಹಿಡಿದ ಸಮಂತಾ ಟ್ವೀಟರ್ ನಲ್ಲಿ ತಮ್ಮ  ಹೆಸರು ಬದಲಾಯಿಸಿಕೊಂಡಿದ್ದಾರೆ. ಸುಮಂತಾ ರುತ್ ಪ್ರಭು ಎಂದಿದ್ದ ಹೆಸರನ್ನು ಇದೀಗ ಸಮಂತಾ ಅಕ್ಕಿನೇನಿಯಾಗಿ ಬದಲಾಯಿಸಿಕೊಂಡಿದ್ದಾರೆ ಸಮಂತಾ.

2014ರಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಇವರಿಬ್ಬರ ಪ್ರೀತಿ ಚಿಗುರಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...