alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಶಿಕ್ಷೆಯಿಂದ ದಿಕ್ಕೆಟ್ಟ ಶೇರಾ

ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದುವರೆದಿದೆ. ಭೋಜನ ವಿರಾಮದ ಬಳಿಕ ಜಾಮೀನು ಅರ್ಜಿ ವಿಚಾರಣೆ ತೀರ್ಪು ಬರುವ ಸಾಧ್ಯತೆಯಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಗೆ 5 ವರ್ಷ ಜೈಲು ಶಿಕ್ಷೆಯಾಗಿದೆ. ಈಗಾಗಲೇ ಸಲ್ಮಾನ್ ಜೋದ್ಪುರ ಜೈಲಿನಲ್ಲಿ 2 ದಿನ ಕಳೆದಿದ್ದಾರೆ. ಸಲ್ಮಾನ್ ಜೈಲು ಶಿಕ್ಷೆ ಬಾಡಿಗಾರ್ಡ್ ಶೇರಾ ಗೆ ಸಂಕಷ್ಟ ತಂದಿದೆ.

ಬಾಲ್ಯದಲ್ಲಿಯೇ ಅಭ್ಯಾಸದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಶೇರಾ ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ನಂತ್ರ ಸೆಕ್ಯೂರಿಟಿ ಏಜೆನ್ಸಿ ತೆಗೆದಿದ್ದ. 1995ರಲ್ಲಿ ಶೇರಾ, ಸಲ್ಮಾನ್ ಬಾಡಿಗಾರ್ಡ್ ಆಗಿ ಕೆಲಸ ಶುರು ಮಾಡಿದ. ಅಲ್ಲಿಂದ ಇಲ್ಲಿಯವರೆಗೂ ಶೇರಾ, ಸಲ್ಮಾನ್ ಬಾಡಿಗಾರ್ಡ್ ಆಗಿ ಕೆಲಸ ಮಾಡ್ತಿದ್ದಾನೆ.

ಸಲ್ಮಾನ್ ಖಾನ್ ಗುರುವಾರ ಕೋರ್ಟ್ ಗೆ ಬಂದಾಗ ಕೂಡ ಶೇರಾ ಜೊತೆಗಿದ್ದ. ಕೋರ್ಟ್ ನಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಿದ್ದ. ಕೋರ್ಟ್ ಒಳಗೆ ಹೋಗಲು ಮುಂದಾಗಿದ್ದ. ಆದ್ರೆ ಕೋರ್ಟ್ ಒಳಗೆ ಬಿಟ್ಟಿರಲಿಲ್ಲ. ನಂತ್ರ ಹೊಟೇಲ್ ನಿಂದ ಆಹಾರ ತಂದುಕೊಡಲು ಮುಂದಾಗಿದ್ದ. ಜೈಲಿನಲ್ಲಿ ಇದಕ್ಕೆ ಅವಕಾಶ ನೀಡಿರಲಿಲ್ಲ.

ಶೇರಾ ಸಲ್ಮಾನ್ ಗಾಗಿ ಪ್ರಾಣ ಬಿಡಲೂ ಸಿದ್ದನಿದ್ದಾನೆ. ಈತನಿಗೆ ತಿಂಗಳಿಗೆ 15 ಲಕ್ಷ ಸಂಬಳ ಎನ್ನಲಾಗಿದೆ. ಶೇರಾ ಮಗ ಟೈಗರ್ ನನ್ನು ಬಾಲಿವುಡ್ ಗೆ ಪರಿಚಯಿಸಲು ಸಲ್ಮಾನ್ ನಿರ್ಧರಿಸಿದ್ದರು. ಆದ್ರೆ ಸಲ್ಮಾನ್ ಈಗ ಜೈಲಿಗೆ ಹೋಗಿದ್ದು, ಶೇರಾನಿಗೆ ಚಿಂತೆ ಶುರುವಾಗಿದೆ. ಸಲ್ಮಾನ್ ಜೈಲಿಗೆ ಹೋಗಿರುವ ನೋವು ಒಂದೆಡೆಯಾದ್ರೆ ಮಗನ ಭವಿಷ್ಯ ಇನ್ನೊಂದು ಚಿಂತೆಗೆ ಕಾರಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...