alex Certify
ಕನ್ನಡ ದುನಿಯಾ       Mobile App
       

Kannada Duniya

ನೈಟ್ ನಲ್ಲಿ ಕತ್ರಿನಾ ಜೊತೆ ಲಾಂಗ್ ಡ್ರೈವ್ ಹೋದ ಸಲ್ಲು

katrina-56bda8d757ef3_exlst

ರಣಬೀರ್ ಕಪೂರ್ ನಿಂದ ದೂರವಾದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್, ಸಲ್ಮಾನ್ ಖಾನ್ ಗೆ ಹತ್ತಿರವಾಗ್ತಿದ್ದಾಳೆ. ಇಬ್ಬರು ಮತ್ತೆ ಒಂದಾಗ್ತಿದ್ದಾರೆಂಬ ಮಾತುಗಳು ಕೇಳಿ ಬರ್ತಾ ಇವೆ.

ಮೊದಲು ಸಲ್ಮಾನ್ ಖಾನ್ ಜೊತೆ ರಿಲೇಷನ್ ಶಿಪ್ನಲ್ಲಿದ್ದ ಕತ್ರಿನಾ, ನಂತರ ರಣಬೀರ್ ಜೊತೆ ಲವ್ ಲೈಫ್ ಶುರುಮಾಡಿದ್ದಳು. ಆದ್ರೆ ಕೆಲ ದಿನಗಳ ಹಿಂದಷ್ಟೇ ಇಬ್ಬರು ಸಂಬಂಧ ಮುರಿದುಕೊಂಡಿದ್ದಾರೆ. ರಣಬೀರ್ ಬ್ರೇಕ್ ಅಪ್ ವೇಳೆ ಕತ್ರಿನಾ, ಸಲ್ಮಾನ್ ಅಭಿಪ್ರಾಯ ಪಡೆದಿದ್ದಾಳೆ ಎನ್ನಲಾಗಿದೆ.

ಇನ್ನು ‘ಬಿಗ್ ಬಾಸ್’ ಸ್ಟೇಜ್ ನಲ್ಲಿ ಸಲ್ಮಾನ್ ಹಾಗೂ ಕತ್ರಿನಾ ಕೆಮೆಸ್ಟ್ರಿ ನೋಡಿ ಜನರು ಆಶ್ಚರ್ಯಗೊಂಡಿದ್ದರು. ಕತ್ರಿನಾ ಕೈ ಹಿಡಿದು ರೋಮ್ಯಾಂಟಿಕ್ ಮಾತುಗಳನ್ನಾಡಿದ್ದ ಸಲ್ಮಾನ್ ನೋಡಿದ ಜನ, ಇಬ್ಬರ ಹೃದಯದಲ್ಲಿ ಇನ್ನೂ ಲವ್ ಉಳಿದುಕೊಂಡಿದೆ ಎಂಬ ತೀರ್ಮಾನಕ್ಕೆ ಬಂದಿದ್ದರು.

ನಂತರ ಸಲ್ಮಾನ್ ‘ಫಿತೂರ್’ ಚಿತ್ರದ ಪ್ರಮೋಷನ್  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಕತ್ರಿನಾಳಿಗಾಗಿಯೇ ಸಲ್ಲು ಬಂದಿದ್ದರೆಂಬ ಸುದ್ದಿ ಇದೆ. ಇಷ್ಟೇ ಅಲ್ಲ, ಕೆಲ ಗಂಟೆ ಮಾತುಕತೆ ನಡೆಸಿದ ಕತ್ರಿನಾ, ಕಾರ್ ಡ್ರೈವರ್ ನನ್ನು ವಾಪಸ್ ಕಳುಹಿಸಿದ್ದಾಳೆ. ಪ್ರಮೋಷನ್ ಕಾರ್ಯಕ್ರಮ ಮುಗಿಯುವ ಮುನ್ನವೇ ಸಲ್ಮಾನ್ ಹಾಗೂ ಕತ್ರಿನಾ ಹೊರಟಿದ್ದಾರೆ. ಸಲ್ಲು ಕಾರ್ ನಲ್ಲಿ ನೈಟ್ ಲಾಂಗ್ ಡ್ರೈವ್ ಹೋಗಿದ್ದರೆಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...