alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಗೆ ಸಿಕ್ಕ ಹುಡುಗಿ ಯಾರು ಗೊತ್ತಾ…?

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಪ್ರೀತಿಯ ಸಹೋದರಿ ಆರ್ಪಿತಾ ಖಾನ್ ರ ವಿವಾಹವನ್ನು ದೆಹಲಿ ಮೂಲದ ಉದ್ಯಮಿ ಆಯುಷ್ ಶರ್ಮಾರೊಂದಿಗೆ ಹೈದರಾಬಾದಿನ ಫಲುಕಾನುಮಾ ಅರಮನೆಯಲ್ಲಿ ಅದ್ದೂರಿಯಾಗಿ ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅಲ್ಲದೇ ಸಹೋದರಿಯ ಪತಿಯನ್ನು ಬಾಲಿವುಡ್ ಗೆ ಲಾಂಚ್ ಮಾಡಲು ಸತತ ಯತ್ನ ನಡೆಸುತ್ತಿರುವ ಸಲ್ಲು ಇಂದು ಮಾಡಿದ ಟ್ವೀಟ್ ಒಂದು ಭಾರೀ ಸುದ್ದಿ ಮಾಡಿತ್ತು.

ನನಗೆ ಹುಡುಗಿ ಸಿಕ್ಕಳು ಎಂದು ಸಲ್ಮಾನ್ ಮಾಡಿದ ಟ್ವೀಟ್ ನೋಡಿದ ಆನೇಕರು ಕೊನೆಗೂ ಸಲ್ಲು ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ತಕ್ಕ ವಧು ಸಿಕ್ಕಿದ್ದಾಳೆಂದೇ ಭಾವಿಸಿದ್ದಾರೆ. ಆದರೆ ಸಹೋದರಿಯ ಪತಿ ಆಯುಷ್ ಶರ್ಮಾನ ಹೊಸ ಸಿನಿಮಾ ‘ಲವ್ ರಾತ್ರಿ’ ಗೆ ನಾಯಕಿ ಸಿಕ್ಕಾಳೆಂದು ಸಲ್ಲು ಸ್ಪಷ್ಟಪಡಿಸಿದ ಬಳಿಕವಷ್ಟೇ ಈ ಗೊಂದಲ ಬಗೆಹರಿದಿದೆ. ಅಂದ ಹಾಗೇ ಸಲ್ಮಾನ್ ಸಹೋದರಿ ಅರ್ಪಿತಾಳ ಪತಿಯ ಹಿನ್ನಲೆ ಏನು ವಿವರ ಇಲ್ಲಿದೆ ನೋಡಿ.

ಈ ಆಯುಷ್ ಶರ್ಮಾನ ತಂದೆ ಅನಿಲ್ ಶರ್ಮಾ ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು. ಆಯುಷ್ ಕುಟುಂಬ ಹಿಂದಿನಿಂದಲೂ ಕಾಂಗ್ರೆಸ್ ನಿಷ್ಟಾವಂತರಾಗಿದ್ದು, ಆಯುಷ್ ಶರ್ಮಾ ಅವರ ತಾತಾ ಸುಖರಾಮ್ ಶರ್ಮಾ ಹಿರಿಯ ಕಾಂಗ್ರೆಸ್ಸಿಗರು. ಶ್ರೀಮಂತ ಕುಟುಂಬದ ಹಿನ್ನಲೆಯಿರುವ ಆಯುಷ್ ದೆಹಲಿಯಲ್ಲಿ ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.

ಸ್ಪುರದ್ರೂಪಿಯಾದ ಇವರನ್ನು ಬಾಲಿವುಡ್ ಚಿತ್ರರಂಗ ಸೆಳೆದಿತ್ತು. ಬಾಲಿವುಡ್ ನಟನಾಗಬೇಕೆಂಬ ಕಾರಣಕ್ಕಾಗಿಯೇ ಮುಂಬೈಗೆ ಬಂದ ಆಯುಷ್ ಶರ್ಮಾ ಹೀರೋ ಆಗಬೇಕೆಂಬ ಕಾರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಇದರಲ್ಲಿ ವಿಫಲವಾದರೂ ಬಾಲಿವುಡ್ ರಂಗೀನ್ ಪಾರ್ಟಿಗಳಲ್ಲಿ ಭೇಟಿಯಾಗಿದ್ದ ಸಲ್ಮಾನ್ ಸಹೋದರಿ ಆರ್ಪಿತಾಳ ಹೃದಯ ಕದಿಯುವಲ್ಲಿ ಯಶಸ್ವಿಯಾದರು.

ಅರ್ಪಿತಾ ಖಾನ್ ಕಂಡರೆ ಆಪಾರ ಪ್ರೀತಿ ಇರುವ ಸಲ್ಮಾನ್ ಕುಟುಂಬ, ಆಕೆ ಮನ ಮೆಚ್ಚಿದ ಹುಡುಗ ಆಯುಷ್ ಶರ್ಮಾನೊಂದಿಗೆ ಮದುವೆ ಮಾಡಿಕೊಡಲು ತಕರಾರಿಲ್ಲದೇ ಒಪ್ಪಿಕೊಂಡಿತು. ಆಯುಷ್ ಕುಟುಂಬ ಸಹ ಈ ಸಂಬಂಧಕ್ಕೆ ಸಂತೋಷದಿಂದಲೇ ಸಮ್ಮತಿಸಿತು.

ಇದೀಗ ತಮ್ಮ ಬ್ಯಾನರ್ ನಡಿಯಲ್ಲೇ ಸಹೋದರಿಯ ಪತಿಯ ಸಿನಿಮಾ ನಿರ್ಮಿಸಲು ಮುಂದಾಗಿರುವ ಸಲ್ಮಾನ್, ಈ ಚಿತ್ರಕ್ಕೆ ನಾಯಕಿಯನ್ನಾಗಿ ಮಾಡೆಲ್ ವರೀನಾ ಹುಸೇನ್ ರನ್ನು ಆಯ್ಕೆ ಮಾಡಿಕೊಂಡಿದ್ದು, ಕೊನೆಗೂ ನಾಯಕಿ ಸಿಕ್ಕಿದ ಖುಷಿಯಲ್ಲಿ ಮಾಡಿದ ಟ್ವೀಟ್ ಗೊಂದಲಕ್ಕೆ ಕಾರಣವಾಗಿತ್ತು. ಸಲ್ಲು ವಿವಾಹಕ್ಕೆ ವಧು ಸಿಕ್ಕಳೆಂದು ಅಭಿಮಾನಿಗಳು ಸಂತಸಗೊಂಡಿದ್ದರಾದರೂ ಇದೀಗ ಅದಕ್ಕೆ ತೆರೆ ಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...