alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಕೆಟ್ಟ ನಟ ಎಂದ ಇರ್ಫಾನ್

irrfan-khan-salman-khan

ಬಾಲಿವುಡ್ ‘ದಬಾಂಗ್’ ಹುಡುಗ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳೆಲ್ಲ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತವೆ. ಸಲ್ಮಾನ್ ಖಾನ್ ಈಗಲೂ ಟಾಪ್ ಲೀಸ್ಟ್ ನಲ್ಲಿದ್ದಾರೆ. ಆದ್ರೆ ನಟ ಇರ್ಫಾನ್ ಖಾನ್ ದೃಷ್ಟಿಯಲ್ಲಿ ಸಲ್ಮಾನ್ ಕೊನೆ ಸ್ಥಾನದಲ್ಲಿದ್ದಾರೆ.

ನಟ ಇರ್ಫಾನ್ ಖಾನ್ ಅಭಿನಯದ ‘ಮದಾರಿ’ ಚಿತ್ರ ತೆರೆಗೆ ಬಂದಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರುವ ಇರ್ಫಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅದ್ರಲ್ಲಿ ಫಟಾಫಟ್ ಉತ್ತರಿಸುವಂತೆ ಪ್ರಶ್ನೆ ಕೇಳಲಾಯ್ತು. ನಿಮ್ಮ ಪ್ರಕಾರ ರಣಬೀರ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಹೃತಿಕ್ ರೋಷನ್ ಇವರಲ್ಲಿ ಉತ್ತಮ ನಟನೆಯಲ್ಲಿ ಯಾರು ಮೊದಲಿದ್ದಾರೆ ಎಂದು ಪ್ರಶ್ನೆ ಕೇಳಲಾಯ್ತು.

ಇದಕ್ಕೆ ಉತ್ತರಿಸಿದ ಇರ್ಫಾನ್, ರಣಬೀರ್, ಶಾರುಖ್, ಅಮೀರ್, ಹೃತಿಕ್ ಮತ್ತು ಸಲ್ಮಾನ್ ಎಂದು ಉತ್ತರಿಸಿದ್ರು. ಈ ಮೂಲಕ ನಟನೆಯಲ್ಲಿ ಸಲ್ಮಾನ್ ವರ್ಸ್ಟ್ ಎಂಬುದನ್ನು ಹೇಳಿದ್ರು. ಇಷ್ಟೇ ಅಲ್ಲ, ಸಲ್ಮಾನ್ ಅಭಿಮಾನಿಗಳು ನನ್ನ ಮೇಲೆ ಸಿಟ್ಟಾಗಲ್ಲ ಅಲ್ವಾ ಎಂದ್ರು ಇರ್ಫಾನ್.

ಸಲ್ಮಾನ್ ಖಾನ್ ರನ್ನು ಕೊನೆ ಸ್ಥಾನದಲ್ಲಿಟ್ಟಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ವಿವಾದ ಮೈಮೇಲೆಳೆದುಕೊಂಡು ಚಿತ್ರದ ಪ್ರಚಾರ ಜಾಸ್ತಿ ಮಾಡುವ ಗಿಮಿಕ್ ಇದು ಎಂದು ಬಾಲಿವುಡ್ ಮಾತನಾಡಿಕೊಳ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...