alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಚಿತ್ರದ ಗಳಿಕೆಯನ್ನು ಒಂದೇ ದಿನದಲ್ಲಿ ಮಕಾಡೆ ಮಲಗಿಸಿದ ಭಾಯಿಜಾನ್

ಚೀನಾದಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಚಿತ್ರಗಳು ಭಾರೀ ಗಳಿಕೆಯನ್ನು ಕಾಣುತ್ತಿವೆ. ಅದರಲ್ಲೂ ಬಾಲಿವುಡ್ ಚಿತ್ರಗಳನ್ನು ಚೀನಿಯರು ಮುಗಿಬಿದ್ದು ನೋಡುತ್ತಿದ್ದು, ಚಿತ್ರೋದ್ಯಮದ ಮಂದಿ ಚೀನಾ ಮಾರುಕಟ್ಟೆಯತ್ತ ತಮ್ಮ ದೃಷ್ಟಿ ಹರಿಸತೊಡಗಿದ್ದಾರೆ.

ಅಮೀರ್ ಖಾನ್ ಅಭಿನಯದ ‘3 ಈಡಿಯೆಟ್ಸ್’, ‘ದಂಗಲ್’, ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರಗಳು ಭಾರೀ ಗಳಿಕೆ ಮಾಡಿ ದಾಖಲೆ ಮಾಡಿರುವುದರ ಮಧ್ಯೆ ಮಾರ್ಚ್ 2 ರಂದು ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ‘ಬಜರಂಗಿ ಭಾಯಿಜಾನ್’ ಚಿತ್ರ ಚೀನಿ ಪ್ರೇಕ್ಷಕರ ಮನಸೂರೆಗೊಂಡಿದೆ.

ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ 2.38 ಬಿಲಿಯನ್ ಡಾಲರ್ ಗಳನ್ನು ಗಳಿಸಿದ್ದು, ಅಚ್ಚರಿಯ ಸಂಗತಿಯೆಂದರೆ ಅಮೀರ್ ಖಾನ್ ಅಭಿನಯದ ‘3 ಈಡಿಯೆಟ್ಸ್’ ಚಿತ್ರ ಚೀನಾದಲ್ಲಿ ಒಟ್ಟಾರೆ ಗಳಿಸಿರುವುದು 2.20 ಮಿಲಿಯನ್ ಡಾಲರ್ ಗಳೆಂಬುದು ಗಮನಾರ್ಹ.

ಚೀನಾದ 8 ಸಾವಿರ ಚಿತ್ರಮಂದಿರಗಳಲ್ಲಿ ‘ಬಜರಂಗಿ ಭಾಯಿಜಾನ್’ ಬಿಡುಗಡೆಯಾಗಿದ್ದು, ಚೀನಿ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ಅಮೀರ್ ಖಾನ್ ರ ‘ದಂಗಲ್’ 6 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ, ‘ಸೀಕ್ರೇಟ್ ಸೂಪರ್ ಸ್ಟಾರ್’ 5 ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು. ಬಾಲಿವುಡ್ ಚಿತ್ರಗಳಿಗೆ ಚೀನಾದಲ್ಲಿ ಭಾರೀ ಬೇಡಿಕೆಯಿರುವುದನ್ನು ಮನಗಂಡಿರುವ ನಿರ್ಮಾಪಕರು ಈಗ ಅತ್ತ ತಮ್ಮ ದೃಷ್ಟಿ ಹರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...