alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ನೆರವಿಗಾಗಿ ಕಾದಿದ್ದಾಳೆ ಬಾಲಿವುಡ್ ನಟಿ

ಬಾಲಿವುಡ್ ನಟಿ ಪೂಜಾ ದದ್ವಾಲ್ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. 1995ರಲ್ಲಿ ಬಿಡುಗಡೆಯಾದ ವೀರ್ ಗತಿ ಚಿತ್ರದಲ್ಲಿ ಪೂಜಾ, ಸಲ್ಮಾನ್ ಖಾನ್ ಗೆ ಜೋಡಿಯಾಗಿದ್ದರು. ಪೂಜಾ ಟಿಬಿ ಹಾಗೂ ಶ್ವಾಸಕೋಶ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದಾರೆ.

ಕಳೆದ 15 ದಿನಗಳಿಂದ ಮುಂಬೈನ ಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೇ ಇರುವುದರಿಂದ ಸಹಾಯ ಮಾಡುವಂತೆ ನಟ ಸಲ್ಮಾನ್ ಖಾನ್ ರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಈವರೆಗೂ ಸಲ್ಲು ಸ್ಪಂದಿಸಿಲ್ಲ.

6 ತಿಂಗಳ ಹಿಂದೆ ತಮಗೆ ಟಿಬಿ ಇದೆ ಅನ್ನೋದು ಪೂಜಾಗೆ ಗೊತ್ತಾಗಿದೆಯಂತೆ. ಆಗಿನಿಂದ್ಲೂ ಸಲ್ಮಾನ್ ಖಾನ್ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದ್ರೆ ಸಾಧ್ಯವಾಗಿಲ್ಲ ಅಂತಾ ಪೂಜಾ ತಿಳಿಸಿದ್ದಾರೆ. ತನಗೆ ಸಹಾಯ ಮಾಡುವಂತೆ ವಿಡಿಯೋ ಒಂದನ್ನು ಸಹ ಪೂಜಾ ಕಳಿಸಿದ್ದಾರೆ.

ಅದನ್ನು ನೋಡಿಯಾದ್ರೂ ಸಲ್ಲು ಪ್ರತಿಕ್ರಿಯಿಸಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಟಿಬಿಗೆ ತುತ್ತಾಗುವ ಮುನ್ನ ಪೂಜಾ ಗೋವಾದ ಕ್ಯಾಸಿನೋ ಒಂದರಲ್ಲಿ ಮ್ಯಾನೇಜರ್ ಆಗಿದ್ದರು. ಪೂಜಾಳ ಆರೋಗ್ಯ ಹದಗೆಡುತ್ತಿದ್ದಂತೆ ಪತಿ ಮತ್ತವನ ಮನೆಯವರು ಆಕೆಯನ್ನು ದೂರ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...