alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ಯನ್ನು ಹಿಂದಿಕ್ಕಿದ ಸಲ್ಮಾನ್ ‘ಟೈಗರ್’

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಚಿತ್ರ ‘ಬಾಹುಬಲಿ -2’. ಈ ಚಿತ್ರದ ದಾಖಲೆಯೊಂದನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಹಿಂದಿಕ್ಕಿದೆ.

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರ 2012 ರ ಬ್ಲಾಕ್ ಬಸ್ಟರ್ ‘ಏಕ್ ಥಾ ಟೈಗರ್’ ಮುಂದುವರೆದ ಭಾಗವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಟೈಗರ್ ಜಿಂದಾ ಹೈ’ ಚಿತ್ರದ ಟ್ರೇಲರ್, ಹಿಂದಿಯ ‘ಬಾಹುಬಲಿ -2’ ಟ್ರೇಲರ್ ದಾಖಲೆ ಹಿಂದಿಕ್ಕಿದೆ. ‘ಬಾಹುಬಲಿ -2’ ಟ್ರೇಲರ್ ಇದುವರೆಗೆ 541 K ಲೈಕ್ಸ್ ಪಡೆದಿದೆ. ‘ಟೈಗರ್ ಜಿಂದಾ ಹೈ’ 673 K ಲೈಕ್ಸ್ ಪಡೆದುಕೊಂಡು ದಾಖಲೆ ಬರೆದಿದೆ.

ನವೆಂಬರ್ 6 ರಂದು ‘ಟೈಗರ್ ಜಿಂದಾ ಹೈ’ ಟ್ರೇಲರ್ ರಿಲೀಸ್ ಆಗಿದ್ದು, ಡಿಸೆಂಬರ್ 22 ರಂದು ಚಿತ್ರ ತೆರೆಗೆ ಬರಲಿದೆ. 5 ವರ್ಷಗಳ ಬಳಿಕ ಸಲ್ಮಾನ್, ಕತ್ರಿನಾ ಮತ್ತೆ ಜೊತೆಯಾಗಿ ಅಭಿನಯಿಸಿದ್ದಾರೆ. ಆರಂಭದಿಂದಲೂ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...