alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಲವ್ ಲೈಫ್ ಗುಟ್ಟು ಬಿಚ್ಚಿಟ್ಟ ಟೀಚರ್

ಬಾಲಿವುಡ್ ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಯಾರು ಅಂದ್ರೆ ಎಲ್ಲರೂ ಹೇಳೋದು ಸಲ್ಮಾನ್ ಖಾನ್ ಅಂತ. ಹಾಗಿದ್ದರೂ ಮಿಸ್ಟರ್ ಬಾಕ್ಸ್ ಆಫೀಸ್ ಸುಲ್ತಾನ್ ನ ಪ್ರೇಮ ಪ್ರಕರಣಗಳು ಒಂದೆರಡಲ್ಲ. ಸಲ್ಲು ಬದುಕಿನಲ್ಲಿ ಬಂದು ಹೋದ ಹುಡುಗಿಯರ ಬಗ್ಗೆ ಬಾಲಿವುಡ್ ಲೆಕ್ಕ ಇಡೋದು ತಪ್ಪಿಸಿಲ್ಲ. ಆದ್ರೆ ಈ ಮಿಸ್ಟರ್ ಸಲ್ಮಾನ್ ಖಾನ್ ಮಾಸ್ಟರ್ ಸಲ್ಮಾನ್ ಆಗಿದ್ದಾಗ ಹೇಗಿದ್ದರು ಅನ್ನೋ ಗುಟ್ಟನ್ನ ಸಲ್ಮಾನ್ ಖಾನ್ ಶಾಲಾ ದಿನಗಳ ಶಿಕ್ಷಕರೊಬ್ಬರು ರಟ್ಟು ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಮುಂಬೈನ ಖಾಸಗಿ ಮಾಧ್ಯಮಗಳು ಸಲ್ಮಾನ್ ಶಿಕ್ಷಕರೊಬ್ಬರನ್ನ ಮಾತಿಗೆಳೆದಿದ್ದಾರೆ. ಆಗ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನ ಶಿಕ್ಷಕರು ಹೇಳಿದ್ದಾರೆ. ಶಿಕ್ಷಕರ ಪ್ರಕಾರ ಶಾಲಾ ದಿನಗಳಿಂದಲೂ ಸಲ್ಮಾನ್ ಖಾನ್ ಎಲ್ಲರಿಗೂ ಇಷ್ಟವಾಗ್ತಿದ್ದರಂತೆ. ಎಲ್ಲರೂ ಪ್ರೀತಿಯಿಂದ ಮಾತನಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ರನ್ನ ಎಲ್ಲರೂ ಇಷ್ಟಪಡುವಂತಾ ಗುಣಗಳಿದ್ದವಂತೆ.

ಮತ್ತೊಂದು ಮುಖ್ಯವಾದ ವಿಚಾರ ಏನಂದ್ರೆ ಸಲ್ಮಾನ್ ಖಾನ್ ಶಾಲೆಗೆ ಬೈಕ್ ನಲ್ಲೇ ಹೋಗ್ತಿದ್ದರಂತೆ. ಆಗ ಎಲ್ಲರ ಕಣ್ಣು ಸಲ್ಲು ಮೇಲಿದ್ರು ಇವರು ಮಾತ್ರ ಅಕ್ಕಪಕ್ಕದಲ್ಲಿ ಯಾರನ್ನು ನೋಡದೆ ಹೋಗಿಬಿಡ್ತಿದ್ದರಂತೆ. ಅಂದು ಕೂಡ ಸಲ್ಮಾನ್ ಯಂಗ್ ಅಂಡ್ ಎನರ್ಜೆಟಿಕ್ ಆಗಿದ್ದ ಅಂತಾರೆ ಸಲ್ಲು ಶಿಕ್ಷಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...