alex Certify
ಕನ್ನಡ ದುನಿಯಾ       Mobile App
       

Kannada Duniya

ಗುಸು ಗುಸು ಸುದ್ದಿಗೆ ಕಾರಣವಾಗಿದೆ ಸಲ್ಮಾನ್ ಗೆಳತಿಯ ಈ ಪೋಸ್ಟ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಗರ್ಲ್ ಫ್ರೆಂಡ್ ಲೂಲಿಯಾ ವಾಂಟೋರ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಅನುಮಾನ ಮತ್ತೆ ಶುರುವಾಗಿದೆ. ಕಾರಣ ಲೂಲಿಯಾಳ ಒಂದು ಇನ್ಸ್ಟಾಗ್ರಾಂ ಪೋಸ್ಟ್.

ಆದ್ರೆ ಈ ಪೋಸ್ಟ್ ನ್ನು ಈಗ ಡಿಲೀಟ್ ಮಾಡಲಾಗಿದೆ. ಆ ಪೋಸ್ಟ್ ಓದಿದವರು ಹೇಳಿದ ಪ್ರಕಾರ ‘ನಾನು ಮಾಡಿದ ದೊಡ್ಡ ತಪ್ಪು ಇದು, ನನ್ನ ಪ್ರೀತಿಗೆ ಸರಿಯಾದ ವ್ಯಕ್ತಿಯನ್ನು ಹುಡುಕುವುದರಲ್ಲಿ ಎಡವಿದೆ’ ಎಂದು ಬರೆದಿದ್ದಳಂತೆ.

ಅಷ್ಟಕ್ಕೂ ಲೂಲಿಯಾ ಈ ಪೋಸ್ಟ್ ಹಾಕಲು ಕಾರಣ ಏನ್ ಗೊತ್ತಾ…? ಬ್ರೇಕ್ ಆಪ್ ಆಗಿದ್ದ ಸಲ್ಮಾನ್ ಮತ್ತು ಕತ್ರೀನಾ ಮತ್ತೆ ಒಂದಾಗ್ತಿದ್ದಾರೆ ಎಂಬ ಅನುಮಾನ. ಇದಕ್ಕೆ ತಕ್ಕಂತೆ ಸಲ್ಮಾನ್ ಮತ್ತು ಕತ್ರೀನಾ, ಸೋನಂ ಕಪೂರ್ ರಿಸೆಪ್ಶನ್ ನಲ್ಲಿ ಆತ್ಮೀಯವಾಗಿ ಮಾತನಾಡಿಕೊಳ್ತಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಜೊತೆಗೆ ‘ಟೈಗರ್ ಜಿಂದಾ ಹೈ’ ಚಿತ್ರದ ನಂತರ ಇಬ್ಬರು ಮತ್ತಷ್ಟು ಹತ್ತಿರವಾಗಿದ್ದಾರೆ ಎಂಬ ಸುದ್ದಿ ಕೂಡಾ ಹಬ್ಬಿತ್ತು. ಅಲ್ಲದೆ, ಕೃಷ್ಣಮೃಗ ಹತ್ಯೆ ಪ್ರಕರಣದ ತೀರ್ಪು ಹೊರ ಬೀಳುವ ಮುನ್ನ, ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಜೊತೆ ಕತ್ರೀನಾ ಕೂಡಾ ಸಿದ್ದಿವಿನಾಯಕ ಮಂದಿರಕ್ಕೆ ಭೇಟಿ ಕೊಟ್ಟಿದ್ಲು. ಇವೆಲ್ಲಾ ಸುದ್ದಿಗಳು ಲೂಲಿಯಾ ಆಕ್ರೋಶಕ್ಕೆ ಕಾರಣವಾಗಿವೆ ಅನ್ಸತ್ತೆ. ಹೀಗೆ ಆದ್ರೆ ರೊಮೆನಿಯಾದ ಈ ಬೆಡಗಿ ಸಲ್ಮಾನ್ ಖಾನ್ ಗೆ ಗುಡ್ ಬೈ ಹೇಳೋದ್ರಲ್ಲಿ ಎರಡು ಮಾತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...