alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು ಗೆಳತಿ ಲೂಲಿಯಾ ರಂಗಪ್ರವೇಶಕ್ಕೆ ವೇದಿಕೆ ಸಿದ್ದ

ರೊಮೇನಿಯಾದ ಹಾಡುಗಾರ್ತಿ, ಒಂದಷ್ಟು ದಿನಗಳ ಕಾಲ ಸಲ್ಮಾನ್ ಮನದನ್ನೆಯಾಗಿ ಕೇಳಿ ಬಂದ ಹೆಸರು, ಈಗ ಸದ್ಯಕ್ಕೆ ಸಲ್ಲು ಗೆಳತಿಯಾಗಿ ಗುರುತಿಸಿಕೊಂಡಿರುವ ಲೂಲಿಯಾ ವೆಂಟೂರ್ ಬಾಲಿವುಡ್ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಲೂಲಿಯಾ ನಟಿಯಾಗಿ ಬಣ್ಣ ಹಚ್ಚುತ್ತಿರುವ ಮೊದಲ ಸಿನಿಮಾದ ಪೋಸ್ಟರ್ ಕೃಷ್ಣ ಜನ್ಮಾಷ್ಟಮಿಯಂದು ಬಿಡುಗಡೆಯಾಗಿದೆ.

ರಾಧಾ ಕಿ ಗೋರಿ ಮೆ ಕ್ಯುಮ್ ಕಲಾ ಹೆಸರಿನ ಸಿನಿಮಾದ ಮೂಲಕ ಲೂಲಿಯಾ ವೆಂಟೂರ್ ಬಾಲಿವುಡ್ ಡೆಬ್ಯು ಮಾಡ್ತಿದ್ದಾರೆ. ಸತ್ಯಂ ಶಿವಂ ಸುಂದರಂ ಚಿತ್ರದ ಯಶೋಮತಿ ಮಯ್ಯಾಸೆ ಪೂಛೆ ಹಾಡಿನ ಸಾಲುಗಳಿಂದ ಪ್ರಭಾವಿತರಾಗಿ ನಿರ್ದೇಶಕರು ಚಿತ್ರದ ಶೀರ್ಷಿಕೆಯನ್ನ ಫೈನಲ್ ಮಾಡಿದ್ದಾರೆ.

ನಿರ್ದೇಶಕ ಪ್ರೇಮ್ ಆರ್ ಸೋನಿ ಟ್ವಿಟ್ಟರ್ ಮೂಲಕ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕೃಷ್ಣ ಭಕ್ತಿಯ ಸಾರವನ್ನು ಹೇಳುವ ಸಿನಿಮಾ ಇದಾಗಿದ್ದು, ಅತಿಥಿಗಳನ್ನು ದೇವರೆಂದು ಭಾವಿಸುವ ಭೂಮಿಗೆ ಲೂಲಿಯಾಗೆ ತುಂಬು ಹೃದಯದ ಸ್ವಾಗತ ಅಂತ ನಿರ್ದೇಶಕರು ಸಂದೇಶವನ್ನು ಬರೆದಿದ್ದಾರೆ.

ಲೂಲಿಯಾ ಈ ಚಿತ್ರದಲ್ಲಿ ಕೃಷ್ಣ ಭಕ್ತೆಯಾಗಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಈಗಾಗ್ಲೇ ಬಾಲಿವುಡ್ ನಲ್ಲಿ ಲೂಲಿಯಾ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಲೂಲಿಯಾ ಅಭಿನಯಿಸಿರುವ ಈ ಚಿತ್ರಕ್ಕೆ ಒಳ್ಳೆಯದಾಗ್ಲಿ ಅಂತ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...