alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ನಲ್ಲಿ ಅನಾಮಧೇಯನಂತೆ ಕುಳಿತಿದ್ದ ಖ್ಯಾತ ನಟ

ದುಬೈ: ಎಲ್ಲರಂತೆ ಮೂಲೆಯಲ್ಲಿ ಕುಳಿತು ಮೊಬೈಲ್‌ ಒತ್ತುತ್ತಿದ್ದವರು ಬಾಲಿವುಡ್‌ನ ಪ್ರಸಿದ್ಧ ನಟ ಎಂದು ಯಾರಿಗೂ ಗೊತ್ತಾಗಿಲ್ಲ. ಹೌದು, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ದುಬೈನ ಶಾಪಿಂಗ್‌ ಮಾಲ್‌ ಒಂದರಲ್ಲಿ ಕಾಲ ಕಳೆದಿದ್ದಾರೆ. ಅದೂ ಅಭಿಮಾನಿಗಳ ಕಣ್ಣಿನಿಂದ ತಪ್ಪಿಸಿಕೊಂಡು…!

ತಮ್ಮ ಬಾಡಿಗಾರ್ಡ್‌ ಗಳನ್ನೂ ಕೊಂಚ ಸಮಯ ದೂರ ಇಟ್ಟಿದ್ದ ಸಲ್ಲು ಬಾಯ್, ಮಾಲ್‌ ಒಳಗಿನ ಕುಳಿತುಕೊಳ್ಳಲಿರುವ ಜಾಗದಲ್ಲಿ ಮೊಬೈಲ್‌ ಒತ್ತುತ್ತಾ ಕಾಲ ಕಳೆದಿದ್ದಾರೆ. ಅಷ್ಟು ಮಾತ್ರ ಅಲ್ಲ, ಮಾಲ್‌ ನಲ್ಲಿ ಓಡಾಡಿ ಸ್ವಲ್ಪ ಸಮಯ ನಾರ್ಮಲ್‌ ಜಿಂದಗಿಯನ್ನು ಎಂಜಾಯ್‌ ಮಾಡಿದ್ದಾರೆ.

ಯಾರಿಗೂ ಗೊತ್ತಾಗದ ವಿಚಾರ, ಇನ್‌ಸ್ಟಾಗ್ರಾಂನಲ್ಲಿ ಫ್ಯಾನ್‌ ಕ್ಲಬ್‌ ಗೆ ಗೊತ್ತಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸಲ್ಲು ಬಾಯ್ ಓಡಾಡುವ ದೃಶ್ಯ ವೈರಲ್‌ ಆಗಿ ಬಿಟ್ಟಿದೆ.

ಪ್ರಸ್ತುತ ಅಲಿ ಅಬ್ಬಾಸ್‌ ಅವರ ‘ಭಾರತ್‌’ ಚಿತ್ರದಲ್ಲಿ ಬ್ಯುಸಿಯಾಗಿರುವ ಸಲ್ಮಾನ್‌ ಖಾನ್‌, ದಶಕದ ಬಳಿಕ ಪ್ರಿಯಾಂಕ ಚೋಪ್ರಾ ಅವರೊಂದಿಗೆ 2019 ರ ಈದ್‌ ಹಬ್ಬದ ಸಮಯದಲ್ಲಿ ತೆರೆಯಲ್ಲಿ ಕಾಣಲಿದ್ದಾರೆ. 2008 ರಲ್ಲಿ ಗಾಡ್‌ ತುಸ್ಸಿ ಗ್ರೇಟ್‌ ಹೋ ಚಿತ್ರದ ಬಳಿಕ ಸಲ್ಲು- ಪ್ರಿಯಾಂಕ ಜತೆಯಾದ ಚಿತ್ರಗಳಿರಲಿಲ್ಲ. ಇದಲ್ಲದೆ ದಿಶಾ ಪಠಾಣಿಯೂ ‘ಭಾರತ್‌’ ಚಿತ್ರದಲ್ಲಿ ಸಲ್ಲು ಜತೆ ತೆರೆಯಲ್ಲಿ ಕಾಣಲಿದ್ದಾರೆ.

ಈ ಎಲ್ಲ ಬ್ಯುಸಿ ಶೆಡ್ಯೂಲ್‌ಗಳ ನಡುವೆ ಸಲ್ಲು ಕೊಂಚ ಕಾಲ ಫ್ರೀ ಮಾಡಿಕೊಂಡು ಮಾಲ್‌ ಕಡೆ ಪಾದ ಬೆಳೆಸಿ ಅಚ್ಚರಿ ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...