alex Certify
ಕನ್ನಡ ದುನಿಯಾ       Mobile App
       

Kannada Duniya

250 ರಿಂದ 700 ಕೋಟಿ ರೂ. ಶುಲ್ಕ ಪಡೆಯಲಿದ್ದಾರಾ ಈ ಸ್ಟಾರ್ಸ್ ?

untitled-design-2-12

ಸಲ್ಮಾನ್ ಖಾನ್, ಅಮಿರ್ ಖಾನ್ ಹಾಗೂ ಶಾರುಕ್ ಖಾನ್ ಈಗಲೂ ಬಾಲಿವುಡ್ ನ ಮೂರು ಮುತ್ತುಗಳು. ಬಾಲಿವುಡ್ ಗೆ ಹಿಟ್ ಚಿತ್ರಗಳನ್ನು ನೀಡಿರುವ ಇವರು ಉಳಿದ ನಟರಿಗೆ ಹೋಲಿಸಿದ್ರೆ ಗಳಿಕೆ ವಿಚಾರದಲ್ಲಿಯೂ ಮುಂದಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮೂವರು ನಟರು ಚಿತ್ರದಲ್ಲಿ ನಟಿಸಲು ಹಣ ಪಡೆಯುತ್ತಿಲ್ಲ.

ಆಶ್ಚರ್ಯಪಡಬೇಡಿ. ಉಚಿತವಾಗಿ ಶಾರುಕ್, ಸಲ್ಮಾನ್ ಹಾಗೂ ಅಮಿರ್ ಚಿತ್ರಗಳಲ್ಲಿ ನಟಿಸ್ತಿಲ್ಲ. ಬಾಲಿವುಡ್ ನಲ್ಲೊಂದು ಹೊಸ ಟ್ರೆಂಡ್ ಶುರುಮಾಡಿದ್ದಾರೆ. ಈ ಸ್ಟಾರ್ಸ್ ಚಿತ್ರದ ಲಾಭದಲ್ಲಿ ಒಂದು ಭಾಗವನ್ನು ಪಡೆಯುತ್ತಿದ್ದಾರೆ.

ಸದ್ಯ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಅಮೀರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ಚಿತ್ರದ ಶೇಕಡಾ 70ರಷ್ಟು ಲಾಭವನ್ನು ಅಮೀರ್ ಗೆ ಕೊಡಲು ಆದಿತ್ಯ ಚೋಪ್ರಾ ಒಪ್ಪಿದ್ದಾರೆ ಎನ್ನಲಾಗ್ತಿದೆ. ಅಮೀರ್ ಹಿಂದಿನ ಚಿತ್ರ ‘ದಂಗಲ್’ ವಿಶ್ವದಾದ್ಯಂತ 2 ಸಾವಿರ ಕೋಟಿ ರೂಪಾಯಿ ಗಳಿಕೆ ಕಂಡಿದೆ. ಒಂದು ವೇಳೆ ‘ದಂಗಲ್’ ಚಿತ್ರ ನಿರ್ಮಾಪಕರ ಜೊತೆ ಅಮೀರ್ ಈ ಒಪ್ಪಂದ ಮಾಡಿಕೊಂಡಿದ್ದರೆ 1400 ಕೋಟಿ ಸಿಗ್ತಾಯಿತ್ತು. ಅಮೀರ್ ಚಿತ್ರ ಆರಾಮವಾಗಿ 500 ಕೋಟಿ ಗಳಿಕೆ ಕಾಣುತ್ತೆ. ಒಂದು ವೇಳೆ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ 1000 ಕೋಟಿ ಗಳಿಕೆ ಕಂಡಲ್ಲಿ ಅಮೀರ್ ಗೆ 700 ಕೋಟಿ ಸಿಗಲಿದೆ.

ಸಲ್ಮಾನ್ ಖಾನ್ ಕೂಡ ‘ಟೈಗರ್ ಜಿಂದಾ ಹೇ’ ಚಿತ್ರಕ್ಕೆ ಶುಲ್ಕ ಪಡೆಯುತ್ತಿಲ್ಲವಂತೆ. ಲಾಭದಲ್ಲಿ ಶೇಕಡಾ 50ರಷ್ಟನ್ನು ತನಗೆ ನೀಡುವಂತೆ ಸಲ್ಮಾನ್ ಒಪ್ಪಂದ ಮಾಡಿಕೊಂಡಿದ್ದಾರೆನ್ನಲಾಗ್ತಿದೆ. ಒಂದು ವೇಳೆ ‘ಟೈಗರ್ ಜಿಂದಾ ಹೇ’ ಚಿತ್ರ 500 ಕೋಟಿ ಗಳಿಸಿದ್ರೆ ಅದ್ರಲ್ಲಿ 250 ಕೋಟಿ ಸಲ್ಮಾನ್ ಪಾಲಾಗಲಿದೆ.

ಸಲ್ಮಾನ್, ಅಮೀರ್ ಒಪ್ಪಂದ ಮಾಡಿಕೊಂಡಿರುವ ಮೊದಲ ಚಿತ್ರ ಇದಲ್ಲ. ಈ ಹಿಂದೆಯೂ ಈ ಸ್ಟಾರ್ಸ್ ಚಿತ್ರದಲ್ಲಿ ಲಾಭ ಪಡೆದಿದ್ದಾರೆ. ಶೇಕಡಾ 50-80ರಷ್ಟು ಲಾಭ ಪಡೆದ ಉದಾಹರಣೆಯೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...