alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬ ಮಿಸ್ ಮಾಡ್ಕೋಳ್ತಿದ್ದಾರೆ ಸಲ್ಮಾನ್

Salman Khan to miss Ganesh Chaturthi celebrations this year!ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬ, ಬಹುತೇಕ ಭಾರತೀಯ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸುತ್ತದೆ. ಈದ್, ಗಣಪತಿ ಹಬ್ಬ, ಕ್ರಿಸ್ ಮಸ್ ಹೀಗೆ ಎಲ್ಲ ಪ್ರಮುಖ ಹಬ್ಬಗಳನ್ನು ಈ ಕುಟುಂಬ ಆಚರಿಸುತ್ತಿದ್ದು, ಈ ಸಂದರ್ಭಗಳಲ್ಲಿ ಕುಟುಂಬ ಸದಸ್ಯರು ತಪ್ಪದೇ ಹಾಜರಿರುತ್ತಾರೆ. ಅದರೆ ಈ ಬಾರಿ ಮಾತ್ರ ಸಲ್ಮಾನ್ ಖಾನ್ ಕುಟುಂಬ ಸದಸ್ಯರ ಜೊತೆ ಗಣಪತಿ ಹಬ್ಬ ಆಚರಿಸುವ ಅವಕಾಶ ಮಿಸ್ ಮಾಡ್ಕೋಳ್ತಿದ್ದಾರೆ.

ಕಳೆದ ವರ್ಷ ಸಹೋದರಿ ಅಲ್ವಿರಾರ ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಖಾನ್, ಕುಟುಂಬ ಸದಸ್ಯರ ಜೊತೆ ಗಣಪತಿ ಹಬ್ಬವನ್ನು ಆಚರಿಸಿದ್ದರು. ಸಲ್ಮಾನ್ ಖಾನ್ ಅವರ ಮನೆಯಲ್ಲೂ ಪ್ರತಿ ವರ್ಷ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದಲ್ಲದೇ ವಿಸರ್ಜನೆ ವೇಳೆ ಸಲ್ಮಾನ್ ಖಾನ್ ಸ್ಟೆಪ್ ಕೂಡಾ ಹಾಕುತ್ತಾರೆ.

ಆದರೆ ಪ್ರಸ್ತುತ ಕಬೀರ್ ಖಾನ್ ನಿರ್ಮಾಣದ ‘ಟ್ಯೂಬ್ ಲೈಟ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸುತ್ತಿದ್ದು, ಇದರ ಚಿತ್ರೀಕರಣ ಮನಾಲಿಯಲ್ಲಿ ನಡೆಯುತ್ತಿದೆ. ‘ಟ್ಯೂಬ್ ಲೈಟ್’ ಚಿತ್ರೀಕರಣದ ಬಳಿಕ ಸಲ್ಮಾನ್ ಖಾನ್ ‘ಬಿಗ್ ಬಾಸ್’ ನಲ್ಲಿ ಪಾಲ್ಗೊಳ್ಳಬೇಕಿರುವ ಕಾರಣ, ಕಬೀರ್ ಖಾನ್ ಅದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಮನಾಲಿಗೆ ತೆರಳುತ್ತಿದ್ದು, ಈ ಬಾರಿಯ ಗಣಪತಿ ಹಬ್ಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...