alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಸಮಸ್ಯೆಗೆ ಹೀಗಿದೆ ಸಲ್ಮಾನ್ ಖಾನ್ ಪರಿಹಾರ

slmanf

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪಾಕಿಸ್ತಾನ ಗಡಿ ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದ್ದಾರೆ.

‘ಟ್ಯೂಬ್ ಲೈಟ್’ ಚಿತ್ರದ ಪ್ರಮೋಷನ್ ನಲ್ಲಿ ಸಲ್ಮಾನ್ ಖಾನ್ ಈ ಕುರಿತಂತೆ ಮಾತನಾಡಿ, ಯುದ್ಧ ಬೇಕು ಎನ್ನುವವರ ಕೈಗೆ ಗನ್ ಕೊಟ್ಟು ಯುದ್ಧ ಭೂಮಿಗೆ ಕಳುಹಿಸಬೇಕಿದೆ. ಆಗ ಅವರಿಗೆ ಪರಿಣಾಮ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಗಡಿ ಸಮಸ್ಯೆಗೆ ಯುದ್ಧವೊಂದೇ ಪರಿಹಾರವಲ್ಲ, ಯುದ್ಧದಿಂದ ಎರಡೂ ದೇಶಗಳಿಗೂ ಹಾನಿ, ಜೀವಹಾನಿಯಾಗುತ್ತದೆ. ಅದರ ಬದಲು ಶಾಂತಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ನೀಡಿರುವ ಈ ಹೇಳಿಕೆ ಬಗ್ಗೆ ಆಕ್ಷೇಪಿಸಿರುವ ಶಿವಸೇನೆ, ಇದು ಎಲ್ಲೆಯನ್ನು ಮೀರಿದ ಮಾತಾಗಿದೆ ಎಂದು ತಿಳಿಸಿದೆ.

‘ಟ್ಯೂಬ್ ಲೈಟ್’ ಸಿನಿಮಾ ಭಾರತ –ಚೀನಾ ಯುದ್ಧದ ಕುರಿತಾದ ಕತೆಯಾಗಿದೆ. ಕಬೀರ್ ಖಾನ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...