alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮ ನೆಚ್ಚಿನ ನಟಿಯ ಹೆಸರು ಬಾಯ್ಬಿಟ್ಟ ಸಲ್ಮಾನ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಸದ್ಯ ‘ರೇಸ್ 3’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ರಂಜಾನ್ ಸಂದರ್ಭದಲ್ಲಿ ತೆರೆ ಕಾಣಲಿದೆ ಎನ್ನಲಾಗಿದ್ದು, ಚಿತ್ರದ ಮೇಕಿಂಗ್ ನಿಂದಾಗಿ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

‘ರೇಸ್’ ಸರಣಿಯ ಮೂರನೇ ಚಿತ್ರ ಇದಾಗಿದ್ದು, ಮೊದಲೆರೆಡು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದವು. ಹೀಗಾಗಿ ಈ ಚಿತ್ರವೂ ಕೂಡಾ ಗಳಿಕೆಯಲ್ಲಿ ದಾಖಲೆ ಮಾಡಲಿದೆ ಎಂಬ ಮಾತುಗಳು ಬಾಲಿವುಡ್ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.

ಈ ಮಧ್ಯೆ ಸಲ್ಮಾನ್ ಖಾನ್ ‘ರೇಸ್ 3’ ಚಿತ್ರದ ಪ್ರಮೋಷನ್ ಗಾಗಿ ಮಾಧುರಿ ದೀಕ್ಷಿತ್ ನಡೆಸಿಕೊಡುವ ‘ಡ್ಯಾನ್ಸ್ ದಿವಾನಿ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಿನ ಪೀಳಿಗೆಯ ನಟಿಯರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅತ್ಯುತ್ತಮ ನಟಿ ಎಂದು ತಿಳಿಸಿದ್ದಾರೆ. ಸಲ್ಮಾನ್ ಖಾನ್, ‘ರೇಸ್ 3’ ಚಿತ್ರದಲ್ಲಿ ಜಾಕ್ವೇಲಿನ್ ಫರ್ನಾಂಡಿಸ್ ಜೊತೆ ನಟಿಸುತ್ತಿದ್ದಾರೆ, ಈ ಚಿತ್ರದ ತಾರಾಗಣದಲ್ಲಿ ಅನಿಲ್ ಕಪೂರ್ ಸೇರಿದಂತೆ ಹಲವು ಖ್ಯಾತ ನಟ-ನಟಿಯರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...