alex Certify
ಕನ್ನಡ ದುನಿಯಾ       Mobile App
       

Kannada Duniya

ಪರೋಕ್ಷವಾಗಿ ಪ್ರಿಯಾಂಕಾಗೆ ಟಾಂಗ್ ಕೊಟ್ಟ ಸಲ್ಮಾನ್

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಬಿಗ್ ಬಾಸ್ 12ನೇ ಆವೃತ್ತಿಯ ಲಾಂಚ್ ಗಾಗಿ ಗೋವಾದಲ್ಲಿದ್ದಾರೆ. ಅದ್ಧೂರಿಯಾಗಿ ಆರಂಭಗೊಂಡ ಬಿಗ್ ಬಾಸ್ 12 ನೇ ಆವೃತ್ತಿಯ ಸಂದರ್ಭದಲ್ಲಿ ಸಲ್ಮಾನ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ರು. ಈ ವೇಳೆ ಸಲ್ಲು ಅಪ್ ಕಮಿಂಗ್ ಮೂವಿ ಭಾರತ್ ನಿಂದ ಹೊರನಡೆದ ನಟಿ ಪ್ರಿಯಾಂಕಾ ಚೋಪ್ರಾಗೆ ಸಖತ್ತಾಗಿಯೇ ಟಾಂಗ್ ನೀಡಿದ್ದಾರೆ ಸಲ್ಮಾನ್.

ಚಿತ್ರೀಕರಣಕ್ಕೆ ಐದು ದಿನಗಳಿರುವಾಗ ಪ್ರಿಯಾಂಕ ಚಿತ್ರದಿಂದ ಹೊರನಡೆದದ್ದು ತುಂಬಾನೇ ಒಳ್ಳೆಯದಾಯ್ತು. ಈ ಚಿತ್ರಕ್ಕೆ ಮೊದಲ ಆಯ್ಕೆಯಾಗಿದ್ದೇ ಕತ್ರಿನಾ. ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದ ಕತ್ರೀನಾ ಸ್ಥಾನದಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳೋದಕ್ಕೆ ನಿರ್ದೇಶಕರಿಗೆ ಫೋನ್ ಮಾಡಿ ಒಪ್ಪಿಸಿದ ನಂತರದಲ್ಲೇ ನಾವು ಆಕೆಯನ್ನ ಚಿತ್ರಕ್ಕೆ ಸೆಲೆಕ್ಟ್ ಮಾಡಿದ್ದು. ಈಗ ನಾವು ಆಕೆಯನ್ನ ಕೇಳಬೇಕಾಗಿರೋದು ಏನಂದ್ರೆ ಅವರು ನಿಮಗೆ ನೇರವಾಗಿ ಪರಿಚಯವಿದ್ದಾರಾ ಅಂತ ಸಲ್ಲು ವ್ಯಂಗ್ಯವಾಡಿದ್ದಾರೆ.

ಇನ್ನು ಸಲ್ಮಾನ್ ಮತ್ತು ಪ್ರಿಯಾಂಕ ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ವಿಚಾರ ಬಾಲಿವುಡ್ ತುಂಬೆಲ್ಲಾ ಓಡಾಡ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್, ಸಂಜಯ್ ಜೊತೆ ಸಿನಿಮಾ ಮಾಡುವ ಯೋಚನೆ ಇದೆ. ಕಥೆಯನ್ನ ಸಂಪೂರ್ಣವಾಗಿ ಕೇಳಿಲ್ಲ. ಆದ್ರೆ ಕಥೆಯ ಎಳೆಯನ್ನಷ್ಟೇ ಕೇಳಿದ್ದೇನೆ. ನಾನು ಅವರಿಗೆ ಫೋನ್ ಮಾಡುತ್ತಿದ್ದೇನೆ. ಆದ್ರೆ ಅವರು ನನ್ನ ಕರೆ ಸ್ವೀಕರಿಸುತ್ತಿಲ್ಲ, ನೀವು ಅವರಿಗೆ ನನ್ನ ಕರೆ ಸ್ವೀಕರಿಸುವಂತೆ ಹೇಳಿ ಅಂತ ಪ್ರಿಯಾಂಕಾಗೆ ಟಾಂಗ್ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...