alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಆಳಿದ್ದ ಗೋವಿಂದ್ ಸ್ಥಿತಿ ಹೀಗಾಯ್ತು..?!

govinda-contacts

ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಟ ಗೋವಿಂದ್ ಗೆ ಕೆಲಸವಿಲ್ಲದಂತಾಗಿದೆ. ಬಾಲಿವುಡ್ ನಲ್ಲಿ ಯಾವುದೇ ಚಿತ್ರ ಸಿಗ್ತಾ ಇಲ್ಲ. ಆ ಗಯಾ ಹೀರೋದಲ್ಲಿ ಗೋವಿಂದ್ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಗೋವಿಂದ್ ನಿರ್ದೇಶನ ಮಾಡಿದ್ದರು. ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಓಡಲಿಲ್ಲ.

ನಂತ್ರ ಜಗ್ಗಾ ಜಾಸೂಸ್ ಚಿತ್ರದಲ್ಲಿ ಗೋವಿಂದ್ ನಟಿಸ್ತಾರೆ ಎಂಬ ಸುದ್ದಿಯಾಗಿತ್ತು. ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಆದ್ರೆ ಅನುರಾಗ್ ಬಸು ಕೈಕೊಟ್ಟರು. ಗೋವಿಂದ್ ಜಗ್ಗಾ ಜಾಸೂಸ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಇದ್ರಿಂದ ಕೋಪಗೊಂಡ ಗೋವಿಂದ್ ಟ್ವೀಟರ್ ನಲ್ಲಿ ತಮ್ಮ ಕೋಪ ವ್ಯಕ್ತಪಡಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ನಡೆದಿತ್ತು. ನಾನು ಒಂದು ಪೈಸೆ ಹಣ ಪಡೆಯಲಿಲ್ಲ. ಆರೋಗ್ಯ ಸರಿಯಿಲ್ಲವೆಂದ್ರೂ ಅಲ್ಲಿಗೆ ಹೋಗಿದ್ದೆ ಎಂದು ಗೋವಿಂದ್ ತಮ್ಮ ಕೋಪವನ್ನು ಟ್ವೀಟರ್ ನಲ್ಲಿ ಹೇಳಿದ್ದರು.

ಇದಕ್ಕೆ ರಣಬೀರ್ ಕಪೂರ್ ಕ್ಷಮೆ ಕೇಳಿದ್ದರು. ಆದ್ರೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಓಡಲಿಲ್ಲ. ಈಗ ಗೋವಿಂದ್ ಬಗ್ಗೆ ಇನ್ನೊಂದು ಸುದ್ದಿ ಹೊರಬಿದ್ದಿದೆ. ಝಲಕ್ ದಿಕಲಾಜಾ ಶೋಗೆ ಸಲ್ಮಾನ್ ಖಾನ್ ಗೋವಿಂದ್ ಹೆಸರು ಸೂಚಿಸಿದ್ದಾರೆ ಎನ್ನಲಾಗ್ತಾ ಇದೆ. ಹದೆರಬೇಡಿ ಸ್ಪರ್ಧಿಯಾಗಯಲ್ಲ. ಗೋವಿಂದ್ ಜಡ್ಜ್ ಸ್ಥಾನದಲ್ಲಿ ಕೂರಲಿದ್ದಾರೆ. ಬಿಗ್ ಬಾಸ್ ನಂತ್ರ ಝಲಕ್ ದಿಕಲಾಜಾ ಶುರುವಾಗಲಿದೆ ಎಂದು ಮೂಲಗಳು ಹೇಳ್ತಾ ಇವೆ.

ಶ್ರೀದೇವಿ ಹಾಗೂ ಮಲೈಕಾ ಕೂಡ ಜಡ್ಜ್ ಸ್ಥಾನದಲ್ಲಿ ಕೂರಲಿದ್ದಾರೆ. ಕೆಲಸ ಸಿಗದ ಕಾರಣ ಗೋವಿಂದ್ ಟಿವಿ ಶೋಗೆ ಬರಬೇಕಾಗಿದೆ. ಎಲ್ಲ ಸರಿಯಾದ್ರೆ ದೊಡ್ಡ ತೆರೆ ಬದಲು ಕಿರು ತೆರೆಯಲ್ಲಿ ಗೋವಿಂದ್ ನೋಡಿ ಅಭಿಮಾನಿಗಳು ಖುಷಿಪಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...