alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ನಂತ್ರ ಪಾಕ್ ನಲ್ಲಿ ಸಲ್ಮಾನ್ ಜಲ್ವಾ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರೇಸ್-3 ಚಿತ್ರ ಭಾರತದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. 10 ದಿನಗಳಲ್ಲಿ ಚಿತ್ರ 150 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈದ್ ನಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಈದ್ ಸಲ್ಮಾನ್ ಗೆ ಲಕ್ಕಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೊದಲ ದಿನವೇ ಭಾರತದಲ್ಲಿ ಚಿತ್ರ 29.17 ಕೋಟಿ ಗಳಿಕೆ ಕಂಡಿತ್ತು.

ಭಾರತದಲ್ಲೊಂದೇ ಅಲ್ಲ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ರೇಸ್-3 ಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ರೇಸ್-3 ಚಿತ್ರ ಜೂನ್ 15 ರಂದೇ ಪಾಕಿಸ್ತಾನದಲ್ಲಿ ತೆರೆಗೆ ಬರಬೇಕಿತ್ತು. ಈದ್ ವೇಳೆ ಬೇರೆ ದೇಶದ ಚಿತ್ರಗಳಿಗೆ ಬ್ಯಾನ್ ಹೇರಿದ್ದ ಕಾರಣ ಚಿತ್ರವನ್ನು ಜೂನ್ 22 ರಂದು ಬಿಡುಗಡೆ ಮಾಡಲಾಗಿದೆ.

ಪಾಕಿಸ್ತಾನಿ ಅಭಿಮಾನಿಗಳು ರೇಸ್-3 ಗೆ ಸಖತ್ ರೆಸ್ಪಾನ್ಸ್ ನೀಡಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದಿದೆ. ಪಾಕಿಸ್ತಾನಿ ಚಿತ್ರಗಳ ದಾಖಲೆಯನ್ನು ಹಿಂದಿಕ್ಕಿದೆ. ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಮೂರನೇ ಚಿತ್ರವಾಗಿದೆ. ಪಾಕಿಸ್ತಾನದಲ್ಲಿ ರೇಸ್-3 ಚಿತ್ರದ ಶನಿವಾರದ ಗಳಿಕೆ 2.25 ಕೋಟಿ ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...