alex Certify
ಕನ್ನಡ ದುನಿಯಾ       Mobile App
       

Kannada Duniya

58 ಪ್ರಶ್ನೆಗಳಿಗೆ ಉತ್ತರ ನೀಡಿದ ದಬಾಂಗ್ ಹುಡುಗ

salman

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 58 ಪ್ರಶ್ನೆಗಳನ್ನು ಕೋರ್ಟ್ ಕೇಳಿದೆ. ಕೋರ್ಟ್ ಮೊದಲು ಜಾತಿಯನ್ನು ಕೇಳಿದೆ. ಇದಕ್ಕೆ ಉತ್ತರ ನೀಡಿದ ಸಲ್ಮಾನ್ ಹಿಂದು ಎಂದಿದ್ದಾರೆ. ನಂತ್ರ ಮುಸ್ಲಿಂ ಎಂದಿದ್ದಾರೆ. ನಂತ್ರ ಭಾರತೀಯ ಎಂದಿದ್ದಾರೆ.

ರಾಜಸ್ಥಾನದ ಜೋದ್ಪುರ ವಿಶೇಷ ನ್ಯಾಯಾಲಯದಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರ ತಂಡದವರ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಈ ವೇಳೆ ಕೋರ್ಟ್ ಮುಂದೆ ಬಂದ ಸಲ್ಮಾನ್ ಖಾನ್ 58 ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನಾನು ನಿರಪರಾಧಿ. ನನಗೆ ಏನೂ ತಿಳಿದಿಲ್ಲ ಎಂದಿದ್ದಾರೆ ಸಲ್ಮಾನ್.

ಶೂಟಿಂಗ್ ಮುಗಿದ ನಂತ್ರ ಎಲ್ಲಿಗೆ ಹೋಗ್ತಿದ್ರಿ ಎಂಬ ಪ್ರಶ್ನೆಗೆ ಹೊಟೇಲ್ ಎಂದು ಉತ್ತರ ನೀಡಿದ್ದಾರೆ ಸಲ್ಮಾನ್ ಖಾನ್. ಸುರಕ್ಷತೆ ದೃಷ್ಟಿಯಿಂದ ರಾತ್ರಿ ಕೂಡ ಹೊರಗೆ ಬರ್ತಾ ಇರಲಿಲ್ಲ ಎಂದ ಸಲ್ಮಾನ್, ನಾನು ನಿರಪರಾಧಿ. ಇದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಕೂಡ ನೀಡಬಲ್ಲೆ ಎಂದಿದ್ದಾರೆ.

ಇದಾದ ನಂತ್ರ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಂ ಕೂಡ ಕೋರ್ಟ್ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸೈಫ್ ಕೂಡ ನಾನು ನಿರಪರಾಧಿ ಎಂದಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆ 18 ವರ್ಷಗಳಿಂದ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...