alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

20 ವರ್ಷಗಳ ಹಿಂದೆ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣ ಈಗಲೂ ನಟ ಸಲ್ಮಾನ್ ಖಾನ್ ರ ನಿದ್ದೆಗೆಡಿಸುತ್ತಿದೆ. ಹಮ್ ಸಾಥ್ ಸಾಥ್ ಹೈ ಚಿತ್ರದ ಶೂಟಿಂಗ್ ವೇಳೆ ಜೋಧ್ಪುರದಲ್ಲಿ ಕೃಷ್ಣಮೃಗವನ್ನು ಹತ್ಯೆ ಮಾಡಿದ್ದಕ್ಕಾಗಿ ಸಲ್ಲುಗೆ 5 ವರ್ಷ ಜೈಲು ಶಿಕ್ಷೆ ಸಹ ಆಗಿದೆ.

ಇತರೆ ಆರೋಪಿಗಳಾದ ನೀಲಂ, ಟಬು ಹಾಗೂ ಸೋನಾಲಿ ಬೇಂದ್ರೆಯನ್ನು ನ್ಯಾಯಾಲಯ ಆರೋಪಮುಕ್ತಗೊಳಿಸಿತ್ತು. 2 ದಿನ ಜೈಲುವಾಸ ಅನುಭವಿಸಿದ ಸಲ್ಮಾನ್ ಖಾನ್ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದಾರೆ.

ಹಮ್ ಸಾಥ್ ಸಾಥ್ ಹೈ ಚಿತ್ರದಲ್ಲಿ ನಟಿಸಿದ್ದ ಕುನಿಚ್ಕಾ ಸದಾನಂದ ಈಗ ಸಲ್ಮಾನ್ ಖಾನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾಳೆ. ಬಿಷ್ಣೊಯ್ ಸಮುದಾಯದ ವಿರುದ್ಧ ಪ್ರಕರಣ ಸಹ ದಾಖಲು ಮಾಡಿದ್ದಾಳೆ. ಕಳೆದ ವಾರ ಟಿವಿ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದ ಆಕೆ, ಸಲ್ಮಾನ್ ಗೆ ಶಿಕ್ಷೆಯಾಗಬಾರದೆಂದು ವಾದಿಸಿದ್ದಳು.

ಬಿಷ್ಣೊಯ್ ಸಮುದಾಯದವರು ಸಹ ಬೇಟೆಗಾರರು ಎಂದು ಹೇಳಿದ್ದಳು. ಇದರ ಬೆನ್ನಲ್ಲೇ ಆಕೆಗೆ ಬೆದರಿಕೆ ಕರೆಗಳು ಬಂದಿದ್ದವು. ನಂತರ ಈ ಬಗ್ಗೆ ಕ್ಷಮೆ ಕೋರಿದ್ದಲ್ಲದೆ, ತಮಗೆ ಬೆದರಿಕೆ ಬರುತ್ತಿರುವ ಬಗ್ಗೆ ಸಹ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಳು. ಇದೀಗ ಬಿಷ್ಣೊಯ್ ಸಮುದಾಯದ ವಿರುದ್ಧ ದೂರು ನೀಡಿರುವ ನಟಿ, ತಮಗೆ  ಬಂದಿರುವ ಬೆದರಿಕೆ ಕರೆಗಳ ವಿವರವನ್ನೂ ಸಲ್ಲಿಸಿದ್ದಾಳೆ.

Dear frnds I’m posting this video, as I got some calls from the Bishnoi community. Please do watch it. I wud like to add that there are some people who are harassing me for the past 3hrs , and abusing me and sending me obscene msgs and death threats. Which makes me wonder, if this is how they can behave with a mini celebrity like me , wonder what they must have tried with someone else in the past 20 years, they are obviously not the Laachar and bachara community that they were made out to be. Also wud like to mention here that I am keeping a record of all the calls and msgs and if necessary will report it to the police. Conclusion: I don’t respect anyone who’d doesn’t respect a woman.

Posted by Kunickaa Sadanand on Saturday, April 7, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...