alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಪಾಷಾ ಕಾಂಡೋಮ್ ಜಾಹೀರಾತಿಗೆ ಸಲ್ಮಾನ್ ಕತ್ತರಿ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ನಟಿ ಬಿಪಾಷಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಕಾಂಡೋಮ್ ಜಾಹೀರಾತಿಗೆ ಕತ್ತರಿ ಹಾಕಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಬಿಪಾಷಾ ನಟಿಸಿರುವ ಕಾಂಡೋಮ್ ಜಾಹೀರಾತು ಪ್ರದರ್ಶನವಾಗ್ತಿತ್ತು. ಆದ್ರೆ ಸಲ್ಮಾನ್ ಖಾನ್ ಹೇಳಿಕೆ ಮೇರೆಗೆ ಈ ಜಾಹೀರಾತನ್ನು ತೆಗೆದು ಹಾಕಲಾಗಿದೆ.

ಬಿಗ್ ಬಾಸ್ ಶೋ ನಿರೂಪಕ ಸಲ್ಮಾನ್ ಖಾನ್ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಲರ್ಸ್ ಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಬಿಗ್ ಬಾಸ್ ಕುಟುಂಬಸ್ಥರು ಕುಳಿತು ನೋಡುವ ಕಾರ್ಯಕ್ರಮ. ಬಿಗ್ ಬಾಸ್ ಗೆ ಬಹು ಸಂಖ್ಯೆಯಲ್ಲಿ ಮಕ್ಕಳೂ ಪ್ರೇಕ್ಷಕರಿದ್ದಾರೆ. ಮಕ್ಕಳು ಇಂಥ ಜಾಹೀರಾತನ್ನು ನೋಡುವುದು ಸೂಕ್ತವಲ್ಲವೆಂದು ಸಲ್ಮಾನ್ ಖಾನ್ ಹೇಳಿದ್ದರು ಎನ್ನಲಾಗಿದೆ.

ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಕಾಂಡೋಮ್ ಜಾಹೀರಾತನ್ನು ಪ್ರದರ್ಶನ ಮಾಡಲಾಗ್ತಾಯಿತ್ತು. ಆದ್ರೆ ಸಲ್ಮಾನ್ ಖಾನ್ ಸಲಹೆ ಪರಿಗಣಿಸಿದ ಕಲರ್ಸ್, ಕಾಂಡೋಮ್ ಜಾಹೀರಾತನ್ನು ತೆಗೆದು ಹಾಕಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ಸಲ್ಲು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...