alex Certify
ಕನ್ನಡ ದುನಿಯಾ       Mobile App
       

Kannada Duniya

16ನೇ ವಯಸ್ಸಿನಲ್ಲೇ ಲವ್ ನಲ್ಲಿ ಬಿದ್ದಿದ್ದ ಸಲ್ಮಾನ್

images

ಬಾಲಿವುಡ್ ಬ್ಯಾಚುಲರ್ ಸಲ್ಮಾನ್ ಖಾನ್ ಕೈ ಹಿಡಿದಿಲ್ಲ ಪ್ರೀತಿ. ಸಲ್ಮಾನ್ ಈವರೆಗೆ ಅನೇಕ ಹುಡುಗಿಯರನ್ನು ಪ್ರೀತಿಸಿದ್ದಾರೆ. ಆದ್ರೆ ಮದುವೆ ಭಾಗ್ಯ ಮಾತ್ರ ಇನ್ನೂ ಒಲಿದು ಬಂದಿಲ್ಲ. ಈ ಮಧ್ಯೆ ಸಲ್ಮಾನ್ ಖಾನ್ ತಮ್ಮ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ 16ನೇ ವಯಸ್ಸಿನಲ್ಲಿಯೇ ಪ್ರೀತಿಗೆ ಬಿದ್ದಿದ್ದರಂತೆ. ಆದ್ರೆ ಅದು ಒನ್ ವೇ ಲವ್ ಎಂದಿದ್ದಾರೆ ಸಲ್ಮಾನ್. ಆಕೆ ಸಲ್ಮಾನ್ ರನ್ನು ಒಳ್ಳೆ ಗೆಳೆಯ ಎಂದುಕೊಂಡಿದ್ದಳಂತೆ. ಆಕೆ ನಾಯಿಯೊಂದನ್ನು ಸಾಕಿದ್ದಳಂತೆ. ಆ ನಾಯಿಗೆ ಸಲ್ಮಾನ್ ಕಂಡರೆ ಆಗ್ತಿರಲಿಲ್ಲವಂತೆ. ನಾಯಿ ಸಲ್ಮಾನ್ ಖಾನ್ ಗೆ ಕಚ್ಚಿತ್ತಂತೆ. ಸಿಟ್ಟಿಗೆದ್ದು ಸಲ್ಮಾನ್ ನಾಯಿಗೆ ಹೊಡೆಯಲು ಹೋದಾಗ ಹುಡುಗಿಯಿಂದ ಬೈಸಿ ಕೊಂಡಿದ್ದರಂತೆ.

ನೋಡಲು ಆಕೆ ಸುಂದರವಾಗಿರಲಿಲ್ಲ. ಆದ್ರೂ ನನ್ನನ್ನು ಸೆಳೆಯುತ್ತಿದ್ದಳು ಎಂದು ಸಲ್ಮಾನ್ ತನ್ನ ಮೊದಲ ಪ್ರೀತಿ ಬಗ್ಗೆ ಹೇಳಿದ್ದಾರೆ. ಸಲ್ಮಾನ್ ಹೆಸರಿನ ಜೊತೆ ಸಂಗೀತಾ ಬಿಜಲಾನಿ, ಐಶ್ವರ್ಯ ರೈ ಬಚ್ಚನ್, ಕತ್ರಿನಾ ಹೆಸರು ಕೇಳಿಬಂದಿದೆ. ಆದ್ರೆ ಈ ಬಗ್ಗೆ ಎಂದೂ ಮಾತನಾಡಿಲ್ಲ ಸಲ್ಮಾನ್. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ತಾನಿನ್ನೂ ವರ್ಜಿನ್ ಎಂದು ಎಲ್ಲರ ಮುಂದೆ ಹೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...